ಸ್ನೇಹ ಜೀವಿ ಶಿವಶರಣಪ್ಪ ವಾಲಿ ನಿಧನ

IMG-20240720-WA0049
Published on


ಕಲಬುರಗಿ : ನಗರದ ಸೇಡಂ ರಸ್ತೆಯ ಗುಲ್ಬರ್ಗ ವಿಶ್ವವಿದ್ಯಾಲಯ ಮುಂಭಾಗದ ಬಡಾವಣೆ ನಿವಾಸಿಯಾಗಿದ್ದ ಸ್ನೇಹ ಜೀವಿ ಕಿರಾಣಾ ವ್ಯಾಪಾರಿ ಶಿವಶರಣಪ್ಪ ಎಸ್.ವಾಲಿ (೫೫) ಶನಿವಾರ ಸಂಜೆ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ, ಪುತ್ರಿ ಸೇರಿದಂತೆ ಬಂಧುಗಳನ್ನು ಅಗಲಿದ್ದಾರೆ. ಭಾನುವಾರ ಮಧ್ಯಾಹ್ನ ೨ ಗಂಟೆಗೆ ಆರ್‌ಟಿಒ ಕಚೇರಿ ಹಿಂಭಾಗದ ಹನುಮಾನ ಮಂದಿರ ಬಳಿಯಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ವಾಲಿ ನಿಧನಕ್ಕೆ ಜಿ-99 ಬಳಗದವರು ಶೋಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net