ಯುವಕರೇ, ಕೃಷಿಯಿಂದ ವಿಮುಖರಾಗಬೇಡಿ | Mud sports

ತೀರ್ಥಹಳ್ಳಿ ತಾಲೂಕಿನ ಮಕ್ಕಿಮನೆ ಗ್ರಾಮ ವಿಕಾಸ ಕೇಂದ್ರದಿಂದ ನಗಡವಳ್ಳಿ ಜಮೀನಿನಲ್ಲಿ ನಡೆದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.
ತೀರ್ಥಹಳ್ಳಿ ತಾಲೂಕಿನ ಮಕ್ಕಿಮನೆ ಗ್ರಾಮ ವಿಕಾಸ ಕೇಂದ್ರದಿಂದ ನಗಡವಳ್ಳಿ ಜಮೀನಿನಲ್ಲಿ ನಡೆದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.
Published on
ತೀರ್ಥಹಳ್ಳಿ: ದೇಶದ ಜನರ ಹಸಿವನ್ನು ನೀಗಿಸಲು ದುಡಿಯುವ ರೈತನ ಬದುಕನ್ನು ಅರಿಯಬೇಕು. ಕೆಸರುಗದ್ದೆಯಲ್ಲಿ ನಡೆಯುವ ಕಂಬಳ ಮುಂತಾದ ಕ್ರೀಡೆಗಳು ಈತಿಹಾಸಿಕ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಮಹತ್ವ ಪಡೆದಿವೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಮಕ್ಕಿಮನೆ ಗ್ರಾಮ ವಿಕಾಸ ಕೇಂದದಿಂದ ನಗಡವಳ್ಳಿ ಜಮೀನಿನಲ್ಲಿ ಭಾನುವಾರ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾವಂತ ಯುವಕರು ಕೃಷಿ ಕ್ಷೇತ್ರದಿಂದ ವಿಮುಖರಾಗಿ ಪಟ್ಟಣದ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ಬಗ್ಗೆ ಯುವಜನರು ಗಂಭೀರ ಚಿಂತನೆ ನಡೆಸಬೇಕು ಎಂದರು.
ಆಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಬದುಕು ಸಂಕೀರ್ಣವಾಗುತ್ತಿರುವ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರೀಡಾಕೂಟದ ಆಯೋಜನೆ ಗಮನಾರ್ಹ. ಇಂತಹಾ ಕ್ರೀಡೆಗಳಿಂದ ಯುವಕರಲ್ಲಿ ಮತ್ತೊಮ್ಮೆ ಈ ಮಣ್ಣಿನ ಸೆಳೆತ ಮರುಕಳಿಸಿ ಕೃಷಿ ಬದುಕಿನ ಕಡೆಗೆ ಆಕರ್ಷಿಸಬೇಕು. ಜತೆಗೆ ಹೊಸ ಸಂಚಲನ ಮೂಡಿಸುವಂತಾಗಲಿ ಎಂದು ಆಶಿಸಿದರು.
ರೈತ ಮಣ್ಣಿನೊಂದಿಗೆ ಅನ್ಯೋನ್ಯ ಭಾವನೆ ಹೊಂದಿರುವ ಪರಿಣಾಮ ನಮಗೆ ತಿನ್ನಲು ಅನ್ನ ದೊರೆಯುತ್ತಿದೆ. ಹವಾಮಾನ ವೈಪರೀತ್ಯ, ದರ ಏರಿಳಿತ ಮುಂತಾದ ಕಾರಣಗಳಿಂದ ಈ ಭಾಗದ ರೈತರು ಭತ್ತದ ಬೆಳೆಯನ್ನು ಕೈಬಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂಗಾರು ಕೊರತೆಯಿಂದಾಗಿ ಈ ವರ್ಷ ಬರಗಾಲ ಎದುರಾಗುವ ಆತಂಕವೂ ಇದೆ ಎಂದರು.
ಮಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಗ್ರಾಮಸ್ಥರಾದ ಶಂಕರನಾರಾಯಣ ಐತಾಳ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net