ನದಿಯಲ್ಲಿ ಮುಳುಗಿ ಯುವಕ ಸಾವು | youth dead

ವಿಕಾಸ್ ಭೋಂಸ್ಲೆ
ವಿಕಾಸ್ ಭೋಂಸ್ಲೆ
Published on
ತೀರ್ಥಹಳ್ಳಿ: ಪಟ್ಟಣದಲ್ಲಿ ಗುರುವಾರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಬಲೂನ್ ಮಾರುವುದಕ್ಕೆ ಬಂದಿದ್ದ ಯುವಕನೋರ್ವ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಹಾರಾಷ್ಟ್ರ ಮೂಲದ ವಿಕಾಸ್ ಭೋಂಸ್ಲೆ (18) ಮೃತ ಯುವಕ. ರಾಮೇಶ್ವರ ದೇವಸ್ಥಾನದ ಹಿಂಬದಿಯ ತುಂಗಾನದಿಯ ಆಳವಾದ ಜಾಗದಲ್ಲಿ ಮೂವರು ಈಜಲು ಹೋಗಿದ್ದು ವಿಕಾಸ್ ಭೋಂಸ್ಲೆ ಮುಳುಗಿ ಮೃತನಾಗಿದ್ದಾನೆ. ಮುಳುಗ ತಜ್ಞ ಈಶ್ವರ್ ಮಲ್ಪೆ ಮತ್ತು ತಂಡದವರು ಶವವನ್ನು ಮೇಲಕ್ಕೆತ್ತಿದ್ದಾರೆ. ಮೃತನ ತಾಯಿಯ ರೋದನ ಹೃದಯ ಕಲಕುವಂತಿತ್ತು. ಶವವನ್ನು ಮಹಾರಾಷ್ಟ್ರಕ್ಕೆ ಕೊಂಡೊಯ್ಯಲು ಪಟ್ಟಣ ಪಂಚಾಯಿತಿಯಿಂದ 5 ಸಾವಿರ ರೂ. ನೀಡಿದ್ದು, ಸಾರ್ವಜನಿಕರಿಂದಲೂ ದೇಣಿಗೆ ಸಂಗ್ರಹಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net