ಪಂಡರಾಪುರಕ್ಕೆ ಯುವಕರ ಸೈಕಲ್ ಯಾತ್ರೆ

ಭದ್ರಾವತಿ ತಾಲೂಕಿನ ಗುಡುಮಗಟ್ಟೆಯ ಯುವಕರು ಸೈಕಲ್‌ನಲ್ಲಿ ಯಾತ್ರೆ ಹೊರಟು ಪಂಡರಾಪುರ ತಲುಪಿರುವುದು.
ಭದ್ರಾವತಿ ತಾಲೂಕಿನ ಗುಡುಮಗಟ್ಟೆಯ ಯುವಕರು ಸೈಕಲ್‌ನಲ್ಲಿ ಯಾತ್ರೆ ಹೊರಟು ಪಂಡರಾಪುರ ತಲುಪಿರುವುದು.
Published on
ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ಗುಡುಮಗಟ್ಟೆ ಗ್ರಾಮದ ನಾಲ್ವರು ಯುವಕರು ಪಂಡರಾಪುರಕ್ಕೆ ಸೈಕಲ್‌ನಲ್ಲಿ ತೆರಳಿ ದೇವರ ದರ್ಶನ ಪಡೆದಿದ್ದಾರೆ.
ಭದ್ರಾವತಿ ತಾಲೂಕಿನ ಗುಡುಮಗಟ್ಟೆಯಿಂದ ಮಹಾರಾಷ್ಟ್ರದ ಪಂಡರಾಪುರದವರೆಗೆ ಯುವಕರು 520 ಕಿ.ಮೀ ಸೈಕಲ್‌ನಲ್ಲಿ ಕ್ರಮಿಸಿ ಯಾತ್ರೆ ಪೂರೈಸಿದ್ದಾರೆ. ಕಾಂತಯ್ಯಸ್ವಾಮಿ, ಮಂಜುನಾಥ, ರಂಗಪ್ಪ, ಮಂಜು ಎಂಬುವರು ಸೈಕಲ್ ಯಾತ್ರೆ ಕೈಗೊಂಡವರು. ಇವರು
ಡಿ.6ರಂದು ಪ್ರಯಾಣ ಆರಂಭಿಸಿದ್ದರು. 12ರಂದು ಪಂಡರಾಪುರ ತಲುಪಿದ ಯುವಕರು ದೇವರ ದರ್ಶನ ಪಡೆದಿದ್ದಾರೆ.
ಹೊನ್ನಾಳಿ- ರಾಣೇಬೆನ್ನೂರು- ಹಾವೇರಿ ಮಾರ್ಗವಾಗಿ ಏಳು ದಿನಗಳ ಕಾಲ ಪ್ರತಿದಿನ 75ರಿಂದ 80 ಕಿ.ಮೀ ಸೈಕಲ್ ತುಳಿದು ಯುವಕರು ಪ್ರಯಾಣ ಪೂರೈಸಿದ್ದಾರೆ. ಹಲಗೇರಿ ದೇವಾಲಯ, ಶಿಗ್ಗಾಂವ್ ರಂಭಾಪುರಿ ಮಠ, ಹೆಬ್ಬಸೂರಿನ ಹೇಮರಡ್ಡಿ ಮಲ್ಲಮ್ಮ ದೇವಾಲಯ,
ಕೆರೂರು, ಬಿಜ್ಜರಗಿ ಹಾಗೂ ಮಹಾರಾಷ್ಟ್ರದ ಉಮಾಡಿ ಸೇರಿ ವಿವಿಧ ದೇವಾಲಯ ಹಾಗೂ ಮಠಗಳಲ್ಲಿ ವಾಸ್ತವ್ಯ ಮಾಡಿ ಪಂಡರಾಪುರ ತಲುಪಿದ್ದಾರೆ. 14ರಂದು ವಾಪಸ್ ಹೊರಟಿದ್ದು, 21ರಂದು ಗುಡುಮಗಟ್ಟೆ ಗ್ರಾಮ ತಲುಪಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net