ಸಾಗರದಲ್ಲಿ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನದಲ್ಲಿ ಬಿ.ಎ.ಇಂದೂಧರ ಬೇಸೂರು ಮಾತನಾಡಿದರು. ದತ್ತಮೂರ್ತಿ ಭಟ್, ಎಸ್.ಸಿ.ಸೈದೂರು, ಮಂಜಪ್ಪ ಇತರರಿದ್ದರು.
ಸಾಗರ: ಯಕ್ಷಗಾನ ಕಲೆಯನ್ನು ಮಕ್ಕಳಿಗೆ ಕಲಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಹೇಳಿದರು.
ಸಾಗರದಲ್ಲಿ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಯಕ್ಷಗಾನ ಕಲೆ ಕಲಿಸುವುದರಿಂದ ಸಂಸ್ಕೃತಿ ಪರಿಚಯವಾಗುತ್ತದೆ. ಇಂತಹ ಕಲೆಗಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಯಕ್ಷಗಾನ ಕಲಾವಿದ ವಿದ್ವಾನ್ ದತ್ತಮೂರ್ತಿ ಭಟ್ ಮಾತನಾಡಿ, ಬೈಂದೂರು, ಮಂಗಳೂರು ಸೇರಿ ವಿವಿಧೆಡೆ ಶಾಸಕರ ಅನುದಾನದಲ್ಲಿ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಗಮನ ಹರಿಸಬೇಕು. ಯಕ್ಷಗಾನ ಕಲಿಕಾ ಕೇಂದ್ರ ಪ್ರಾರಂಭಿಸುವುದರಿಂದ ಮಕ್ಕಳು ಈ ಕಲೆಯನ್ನು ಕಲಿತು ಮುನ್ನಡೆಸುತ್ತಾರೆ ಎಂದರು.
ಕೇಂದ್ರದ ಮುಖ್ಯಸ್ಥ ಎಸ್.ಸಿ.ಸೈದೂರು, ಮಂಜಪ್ಪ, ಗಣಪತಿ, ಶಿವು ಶಿರಳಗಿ, ಪ್ರತಿಭಾ ಪ್ರಸಾದ್, ಪೂರ್ಣಿಮಾ, ರಾಜು ಭಾಗವತ್ ಇತರರಿದ್ದರು. ನಂತರ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.