ಸಂಸ್ಕೃತಿ ಅರಿವು ಮೂಡಿಸುವ ಯಕ್ಷಗಾನ ಕಲೆ

ತೀರ್ಥಹಳ್ಳಿ ಮಳಲಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಯಕ್ಷಗಾನ ತರಬೇತಿ ಶಿಬಿರವನ್ನು ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಉದ್ಘಾಟಿಸಿದರು. ಸತೀಶ್ ರೈ, ನಗರ ರಾಘವೇಂದ್ರ ಇತರರಿದ್ದರು.
ತೀರ್ಥಹಳ್ಳಿ ಮಳಲಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಯಕ್ಷಗಾನ ತರಬೇತಿ ಶಿಬಿರವನ್ನು ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಉದ್ಘಾಟಿಸಿದರು. ಸತೀಶ್ ರೈ, ನಗರ ರಾಘವೇಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಳಲಿಮಕ್ಕಿಯಲ್ಲಿ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟನೆ
ತೀರ್ಥಹಳ್ಳಿ: ಯಕ್ಷಗಾನ ಧಾರ್ಮಿಕ ಭಾವನೆಯೊಂದಿಗೆ ನೆಲದ ಸಂಸ್ಕೃತಿ ಉಳಿವಿಗಾಗಿ ಜಾಗೃತಿ ಮೂಡಿಸುವ ಮಾಧ್ಯಮ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಕಮ್ಮರಡಿ ಘಟಕದಿಂದ ತಾಲೂಕಿನ ಮಳಲಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳ ಮೂಲಕ ಧಾರ್ಮಿಕ ಚಿಂತನೆಯನ್ನು ಮೂಡಿಸುವ ಯಕ್ಷಗಾನ ಆರಾಧನಾ ಕಲೆಯೂ ಆಗಿದೆ. ಅಮೆರಿಕ ಸೇರಿ ವಿದೇಶಗಳಲ್ಲೂ ಸಾಕಷ್ಟು ಪ್ರದರ್ಶನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಕರಾವಳಿ ಹಾಗೂ ಮಲೆನಾಡಿನ ಆಸ್ತಿಕ ಜನತೆ ಯಕ್ಷಗಾನವನ್ನು ಆರಾಧನಾ ಕಲೆ ಎಂಬ ಭಾವನೆಯಿಂದ ಹರಕೆ ಹೇಳಿಕೊಳ್ಳುವ ಪರಂಪರೆ ಇದೆ. ಇದರಿಂದ ಕಟೀಲು, ಮಂದಾರ್ತಿ, ಧರ್ಮಸ್ಥಳ, ಪಾವಂಜೆ, ಕಮಲಶಿಲೆ, ಮಾರಣಕಟ್ಟೆ, ಸಸಿಹಿತ್ಲು ಹೀಗೆ 20 ಮೇಳಗಳು ವರ್ಷಪೂರ್ತಿ ಹರಕೆ ಆಟವಾಗಿ ಪ್ರದರ್ಶನ ನೀಡುತ್ತಿವೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಕಮ್ಮರಡಿ ಘಟಕದ ಅಧ್ಯಕ್ಷ ಸತೀಶ್ ರೈ, ಜಿಲ್ಲಾ ಸಂಚಾಲಕ ಸುಧೀಂದ್ರ ಪಂಡಿತ್, ನಗರ ರಾಘವೇಂದ್ರ, ರವೀಂದ್ರ ಕಾನಳ್ಳಿ, ಶ್ಯಾಮಲಾ ವಿಜಯಕುಮಾರ್, ಟಿ.ಆರ್.ಲಕ್ಷ್ಮಣ್, ಸುಮಂತ್ ಆಚಾರ್ಯ, ಮನೋಹರ್ ಆಚಾರ್ಯ, ನವೀನ್ ಪೂಜಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net