ರಾಜ್ಯದ ಪಶ್ಚಿಮಘಟ್ಟದ 1576 ಗ್ರಾಮಗಳ ಜನರ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ. ಈ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಮೇಲೆ ನಿರ್ಬಂಧ, ಯಂತ್ರೋಪಕರಣಗಳ ಬಳಕೆ ನಿಷೇಧ, ಜನ ಜಾನುವಾರುಗಳ ಓಡಾಟಕ್ಕೆ ಅಡಚಣೆ, ರಸ್ತೆ ಸೇರಿ ಮೂಲ ಸೌಲಭ್ಯಗಳ ಮೇಲೆ ನಿರ್ಬಂಧ ಸೇರಿ ಅನೇಕ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯ ಇಲಾಖೆ ಕಾಯ್ದೆ ಜಾರಿಯಲ್ಲಿರದಿದ್ದರೂ ಕಾಡು, ಹಾಡಿಗಳಲ್ಲಿ ವಾಸಿಸುತ್ತಿರುವ ಅರಣ್ಯ ವಾಸಿಗಳಿಗೆ ತೊಂದರೆ ನೀಡುತ್ತಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್ ವರದಿ ಅನುಷ್ಠಾನ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.