ಮಾರಕವಾಗಿರುವ ಕಾರ್ಮಿಕ ಸಂಹಿತೆ ಅಧಿಸೂಚನೆ ಹಿಂಪಡೆಯಿರಿ| labour notification

ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ಅಧಿಸೂಚನೆ ವಿರೋಧಿಸಿ ಸಿಐಟಿಯು ವತಿಯಿಂದ ಡಿಸಿ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಎನ್.ನಾರಾಯಣ್, ಹನುಮಮ್ಮ, ಕೆ.ಎಲ್.ರಾವ್, ಮುನಿರಾಜು, ಅನಂತರಾಮು ಮುಂತಾದವರು ಭಾಗವಹಿಸಿದ್ದರು.
ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ಅಧಿಸೂಚನೆ ವಿರೋಧಿಸಿ ಸಿಐಟಿಯು ವತಿಯಿಂದ ಡಿಸಿ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಎನ್.ನಾರಾಯಣ್, ಹನುಮಮ್ಮ, ಕೆ.ಎಲ್.ರಾವ್, ಮುನಿರಾಜು, ಅನಂತರಾಮು ಮುಂತಾದವರು ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನಿಷ್ಠ ವೇತನ 36 ಸಾವಿರ ರೂ. ನಿಗದಿಗೊಳಿಸಿ
  • ಸಿಐಟಿಯು ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
  • 12 ತಾಸು ಕೆಲಸದ ತಿದ್ದುಪಡಿ ವಾಪಸ್ ಪಡೆಯಿರಿ
ಶಿವಮೊಗ್ಗ: ಕಾರ್ಮಿಕ (labour) ಸಂಹಿತೆಗಳ ಅಧಿಸೂಚನೆ (notification) ರಾಷ್ಟ್ರದ ದುಡಿಯುವ ಜನರ ಮೇಲೆ ಎಸಗಲಾದ ವಂಚನೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸಿಐಟಿಯು (citu) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ (protest) ನಡೆಸಿದರು.
ಅಧಿಸೂಚನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಉದ್ಯೋಗದಾತರ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸಲಾಗಿದೆ. ಕೇಂದ್ರ (central)ದ ಅಧಿಸೂಚನೆ ಪ್ರಕಾರ ರಾಜ್ಯ ಸರ್ಕಾರ (state goverment) ನಿಯಮಗಳನ್ನು ರಚಿಸಬಾರದು ಎಂದು ಒತ್ತಾಯಿಸಿದರು.
ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರಿಗೆ ಅನುದಾನ ಕಾಯ್ದಿರಿಸಬೇಕು. ಸೆಸ್ ಸಂಗ್ರಹಿಸಿ ಸಾಮಾಜಿಕ ಭದ್ರತಾ ಸೌಲಭ್ಯ ಕೊಡಬೇಕು. ಎಲ್ಲ ಶ್ರೇಣಿಯ ಉದ್ಯೋಗಗಳಿಗೂ ಒಂದೇ ಬಾರಿ ಕನಿಷ್ಠ ವೇತನ ಘೋಷಿಸಬೇಕು. ಕನಿಷ್ಠ ವೇತನದ ಜಾರಿಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಗಾರ್ಮೆಂಟ್ಸ್ (garments) ಮತ್ತು ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೂ ಕನಿಷ್ಠ ವೇತನ ನಿಗದಿಯಾಗಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ವೇತನದ ಮಂಡಳಿ ಶಿಫಾರಸು ಮಾಡಿರುವ ಅಧಿಸೂಚನೆಯನ್ನು ಅಂತಿಮಗೊಳಿಸಿ 36 ಸಾವಿರ ರೂ. ಕನಿಷ್ಠ ವೇತನ ಜಾರಿ ಮಾಡಬೇಕು. ರಾಜ್ಯದಲ್ಲಿ ಕಾರ್ಖಾನೆ (factory)  ಕಾಯ್ದೆಗೆ ತಂದಿರುವ 12 ತಾಸು ಕೆಲಸದ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಅನುದಾನ ಒದಗಿಸಿ ನಿವೃತ್ತಿ ಸೌಲಭ್ಯ ಕೊಡಬೇಕು.
ಸಿಐಟಿಯು ಮುಖಂಡ ಎನ್.ನಾರಾಯಣ್, ಪ್ರಮುಖರಾದ ಷಣ್ಮುಖಪ್ಪ, ಹನುಮಮ್ಮ, ಅನಂತರಾಮು, ಕೆ.ಎಲ್.ರಾವ್, ಮುನಿರಾಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net