ಪಕ್ಷಗಳು ಸಹಕಾರ ನೀಡಲಿ: ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಮತದಾನ ಪಟ್ಟಿ ತಯಾರಿಕೆಯಲ್ಲಿ ಸಹಕಾರ ನೀಡಬೇಕು ಎಂದು ಜಿಪಂ ಉಪಕಾರ್ಯದರ್ಶಿ ಸುಜಾತಾ ಹೇಳಿದರು. ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪರಿಷ್ಕರಣೆ ಕುರಿತು ತಾಲೂಕುಗಳಲ್ಲಿ ಸಭೆಯನ್ನು ಎಲ್ಲ ರಾಜಕೀಯ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಬಿಎಲ್‌ಒಗಳು ಪ್ರತಿ ಮನೆಗೆ ತೆರಳಿ ಮತದಾರರಿಗೆ ಎರಡು ಅರ್ಜಿ ನೀಡಲಿದ್ದು, ಮತದಾರರು ಸ್ವವಿವರ ನಮೂದಿಸಿದ ನಂತರ ಒಂದು ಅರ್ಜಿ ಬಿಎಲ್‌ಒ ಪಡೆದು ಮತ್ತು ಇನ್ನೊಂದರಲ್ಲಿ ಮತದಾರರಿಗೆ ದೃಢೀಕರಣ ಮಾಡಿಕೊಡಲಾಗುವುದು ಎಂದರು. ಸೊರಬ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್, ಹೊನ್ನಪ್ಪ, ಮಾರುತಿ, ಮಂಜುನಾಥ್, ಸಂಜಯ್, ಕೃಷ್ಣಮೂರ್ತಿ ಇತರರಿದ್ದರು.