ತೀರ್ಥಹಳ್ಳಿ: ಪಟ್ಟಣ ವ್ಯಾಪ್ತಿಯಲ್ಲಿರುವ 11 ಬೂತ್ ಸೇರಿ ತಾಲೂಕಿನ 171 ಬೂತ್‌ಮಟ್ಟದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಕಾರ್ಯ ಆರಂಭಗೊಂಡಿದೆ.
ತಾಲೂಕಿನಲ್ಲಿ 1,25,068 ಮತದಾರರಿದ್ದು, ಮಂಗಳವಾರ ತಾಲೂಕಿನಲ್ಲಿ 4,000ಕ್ಕೂ ಅಧಿಕ ಮತದಾರರನ್ನು ಸಂಪರ್ಕಿಸಿ ಫಾರ್ಮ್ ವಿತರಿಸಲಾಗಿದೆ. ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿರುವ 11,994 ಮತದಾರರ ಮನೆಗಳಿಗೂ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಫಾರ್ಮ್‌ಗಳನ್ನು ವಿತರಿಸಲಾಗಿದೆ.
ಪರಿಷ್ಕರಣೆ ಕಾರ್ಯಕ್ಕೆ ಪ್ರತಿ ಬೂತ್‌ಗೆ ಒಬ್ಬರಂತೆ ಪ್ರಮುಖವಾಗಿ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರನ್ನು ನೇಮಿಸಲಾಗಿದೆ. ಗ್ರಾಮ ಲೆಕ್ಕಿಗರು, ಸಮಾಜ ಕಲ್ಯಾಣ, ಲೋಕೋಪಯೋಗಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಸಿಬ್ಬಂದಿ, ಆರ್‌ಡಿಪಿಆರ್ ಮತ್ತು ಬೇರೆ ಇಲಾಖೆಗಳಿಂದ ಬಿಎಲ್‌ಒಗಳನ್ನು ನೇಮಕಗೊಳಿಸಲಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ನೇಮಕಗೊಂಡಿರುವ ಬಿಎಲ್‌ಎಗಳು ಕೂಡ ಈ ಕಾರ್ಯಕ್ಕೆ ನೆರವು ನೀಡುತ್ತಿದ್ದಾರೆ.