ವೋಟ್‌ಬ್ಯಾಂಕ್ ರಾಜಕಾರಣ ಅಪಾಯಕಾರಿ | Awareness Meeting

ಹಿರೇಕಲವತ್ತಿ ಗ್ರಾಮದಲ್ಲಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ವಿಜಯ ರೇವಣಕರ್ ಮಾತನಾಡಿದರು. ಕಾವೇರಿ ರಾಯ್ಕರ್, ರೇಕೇಶ್ ಮಾನೆ ಇದ್ದರು.
ಹಿರೇಕಲವತ್ತಿ ಗ್ರಾಮದಲ್ಲಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ವಿಜಯ ರೇವಣಕರ್ ಮಾತನಾಡಿದರು. ಕಾವೇರಿ ರಾಯ್ಕರ್, ರೇಕೇಶ್ ಮಾನೆ ಇದ್ದರು.
Published on
ಶಿಕಾರಿಪುರ: ಯುಗ ಯುಗಗಳಿಂದ ಹಿಂದೂ ರಾಷ್ಟ್ರವಾಗಿದ್ದ ಭಾರತವನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಜಾತ್ಯತೀತ ರಾಷ್ಟ್ರ ಎಂದು ಸೇರಿಸಲಾಯಿತು. ಇದರ ಪರಿಣಾಮವಾಗಿ ಹಿಂದೂಗಳು ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕಾರ ವಿಜಯ ರೇವಣಕರ್ ಹೇಳಿದರು.
ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕಿದೆ. ಇಂದು ಕ್ರೈಸ್ತರಿಗೆ 150, ಮುಸ್ಲಿಮರಿಗೆ 50ಕ್ಕೂ ಹೆಚ್ಚು ದೇಶಗಳಿವೆ. ಆದರೆ 100 ಕೋಟಿ ಹಿಂದೂಗಳಿಗೆ ಪ್ರತ್ಯೇಕ ರಾಷ್ಟ್ರವಿಲ್ಲ ಎಂದರು.
ಹೆಚ್ಚು ಆದಾಯವಿರುವ ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಲಾಗುತ್ತಿದೆ. ಇದರಿಂದ ದೇವಸ್ಥಾನಗಳಿಗೆ ಮುಕ್ತಿ ಸಿಗಬೇಕಿದೆ. ದೇಶದಲ್ಲಿ ಅನ್ಯ ರಾಷ್ಟ್ರಗಳ ಪರ ಘೋಷಣೆ ಕೂಗಲಾಗುತ್ತಿದೆ. ಲವ್ ಜಿಹಾದ್‌ಗೆ ಯುವತಿಯರು ಬಲಿಯಾಗುತ್ತಿದ್ದಾರೆ. ಇದರ ವಿರುದ್ಧ ಹಿಂದುಗಳೆಲ್ಲ ಒಂದಾಗಿ ಹೋರಾಡಬೇಕಿದೆ ಎಂದು ಹೇಳಿದರು.
ಸನಾತನ ಸಂಸ್ಥೆಯ ಕಾವೇರಿ ರಾಯ್ಕರ್ ಮಾತನಾಡಿ, ಇಂದು ಧರ್ಮ ರಕ್ಷಣೆಗಾಗಿ ಧರ್ಮಾಚರಣೆ ಮಾಡುವುದೇ ಏಕೈಕ ಪರಿಹಾರ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ನಾನು ಹಿಂದೂ ಎಂದು ಹೇಳಿಕೊಳ್ಳಲು ಸಂಕೋಚಪಡುತ್ತಿದ್ದಾರೆ. ಈ ಹಿಂದೆ ಪ್ರಪಂಚದ ಮೂಲೆ ಮೂಲೆಯಿಂದ ವಿದ್ಯೆ ಕಲಿಯಲು ಭಾರತದ ಗುರುಕುಲಗಳಿಗೆ ಬರುತ್ತಿದ್ದರು. ಇಂದು ಇಂತಹ ಶ್ರೇಷ್ಠ ಪರಂಪರೆ, ಸನಾತನ ಸಂಸ್ಕೃತಿಯನ್ನು ರಾಜಕೀಯಕ್ಕಾಗಿ ಕೆಲವರು ಡೆಂೆ, ಮಲೇರಿಯಾಕ್ಕೆ ಹೋಲಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶಿವಮೊಗ್ಗ ನಗರ ಸಂಯೋಜಕ ರೇಕೇಶ್ ಮಾನೆ ಮಾತನಾಡಿದರು. ಶ್ರೀ ಮಣ್ಣು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸುದರ್ಶನ್ ನಾಯ್ಡು, ನಾಗರಾಜ್, ಉಪಾಧ್ಯಕ್ಷ ಪರಶುರಾಮ್, ಭಾಸ್ಕರ್ ನಾಯ್ಡು, ಕೃಷ್ಣಮೂರ್ತಿ, ಕಪ್ಪನಹಳ್ಳಿ ಮಂಡಲ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ನಾಯ್ಡು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net