ಶಿವಮೊಗ್ಗದ ಬಡ ವಿದ್ಯಾರ್ಥಿಗಳಿಗೆ ವಿವೇಕ ವಿದ್ಯಾನಿಧಿ I vidhyanidhi for students

ವಿವೇಕ ವಿದ್ಯಾ ನಿಧಿಯ ಪೋಸ್ಟರನ್ನು ಎಸ್.ಎನ್.ಚನ್ನಬಸಪ್ಪ ಬಿಡುಗಡೆ ಮಾಡಿದರು. ಎಸ್.ಜ್ಞಾನೇಶ್ವರ್, ಡಿ.ಮೋಹನ್ ರೆಡ್ಡಿ, ಪ್ರಿಯಾ, ಸಹನಾ ಚೇತನ್, ಸಂಗೀತಾ, ಪೃಥ್ವಿ ಗೌಡ, ಡಿ.ಎಸ್.ಶಿವಕುಮಾರ್, ಮಂಜುನಾಥ್ ನವುಲೆ ಇದ್ದರು.
ವಿವೇಕ ವಿದ್ಯಾ ನಿಧಿಯ ಪೋಸ್ಟರನ್ನು ಎಸ್.ಎನ್.ಚನ್ನಬಸಪ್ಪ ಬಿಡುಗಡೆ ಮಾಡಿದರು. ಎಸ್.ಜ್ಞಾನೇಶ್ವರ್, ಡಿ.ಮೋಹನ್ ರೆಡ್ಡಿ, ಪ್ರಿಯಾ, ಸಹನಾ ಚೇತನ್, ಸಂಗೀತಾ, ಪೃಥ್ವಿ ಗೌಡ, ಡಿ.ಎಸ್.ಶಿವಕುಮಾರ್, ಮಂಜುನಾಥ್ ನವುಲೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನವರತ ಫೌಂಡೇಷನ್‌ನಿಂದ ಆರ್ಥಿಕ ನೆರವು
  • 50 ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರೋತ್ಸಾಹ ಧನ
  • ಗೌರವಾಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ
ಶಿವಮೊಗ್ಗ:

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ (students) ಅನವರತ (anavarata) ಫೌಂಡೇಷನ್‌ನಿಂದ ವಿವೇಕ (viveka) ವಿದ್ಯಾನಿಧಿ ಹೆಸರಿನಲ್ಲಿ ನೆರವು ನೀಡಲಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಫೌಂಡೇಷನ್‌ನ ಗೌರವಾಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಕಳೆದ ವರ್ಷವೂ ವಿದ್ಯಾ ನಿಧಿ ನೀಡಲಾಗಿತ್ತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಅರ್ಜಿ ಪರಿಶೀಲನೆ ಬಳಿಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ. ನೀಡಲಾಗುವುದು. ಕಳೆದ ವರ್ಷ 50 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿತ್ತು. ಈ ವರ್ಷ 200 ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.50ರಿಂದ 75ರೊಳಗೆ ಅಂಕ ಪಡೆದಿರಬೇಕು. ಕುಟುಂಬದ ಆದಾಯ 1.80 ಲಕ್ಷ ರೂ. ಒಳಗಿರಬೇಕು. ಶಾಲೆ ಇಲ್ಲವೇ ಕಾಲೇಜಿನ ಶುಲ್ಕ 30 ಸಾವಿರ ರೂ. ಮೀರಿರಬಾರದು. ಅರ್ಜಿ ಪಡೆಯಲು ನನ್ನ ಕಚೇರಿ (ಕರ್ತವ್ಯ ಭವನ)ಯನ್ನು ಸಂಪರ್ಕಿಸಬೇಕು. ಅರ್ಜಿ ಸಲ್ಲಿಕೆಗೆ ಸೆ.5 ಕಡೇ ದಿನವಾಗಿದೆ ಎಂದು ವಿವರಿಸಿದರು.
ಅನವರತ ಫೌಂಡೇಷನ್ ಟ್ರಸ್ಟಿಗಳಾದ ಡಿ.ಮೋಹನ್ ರೆಡ್ಡಿ, ಎಸ್.ಜ್ಞಾನೇಶ್ವರ್, ಮಂಜುನಾಥ್ ನವುಲೆ, ಡಿ.ಎಸ್.ಶಿವಕುಮಾರ್, ಸಹನಾ ಚೇತನ್, ಪೃಥ್ವಿ ಗೌಡ, ಪ್ರಜ್ವಲ್, ಸಂಗೀತಾ, ಗುರುರಾಜ್, ನವೀನ್, ಪ್ರಿಯಾ, ಸುನಿಲ್ ಅಂಬೋರೆ, ಆದರ್ಶ ಸುದ್ದಿಗೋಷ್ಠಿಯಲ್ಲಿದ್ದರು.

ಅಗತ್ಯ ದಾಖಲೆಗಳು

ವಿದ್ಯಾರ್ಥಿಯ ಆಧಾರ್ ಕಾರ್ಡ್, ಭಾವಚಿತ್ರ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಯ ಗುರುತಿನ ಪತ್ರ, ವೈಯಕ್ತಿಕ ಬ್ಯಾಂಕ್‌ಖಾತೆ ವಿವರಗಳು, ಶುಲ್ಕ ಪಾವತಿಸಿದ ರಸೀದಿ, ಹಿಂದಿನ ವರ್ಷದ ಅಂಕಪಟ್ಟಿ. ಪಾಲಕರ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ, ಪಾಲಕರ ಮತದಾನದ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net