ಆಹಾರ ಮಾರಾಟ ನಿಯಮ ಉಲ್ಲಂಘನೆ ಅಪರಾಧ

ಹೊಳೆಹೊನ್ನೂರಿನಲ್ಲಿ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಅಧಿಕಾರಿ ಸತ್ಯನಾರಾಯಣ ಅವರು ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಸ್.ವಿಜಯ್, ರಾಜು, ಮಂಜುನಾಥ್ ಇತರರಿದ್ದರು.
ಹೊಳೆಹೊನ್ನೂರಿನಲ್ಲಿ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಅಧಿಕಾರಿ ಸತ್ಯನಾರಾಯಣ ಅವರು ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಸ್.ವಿಜಯ್, ರಾಜು, ಮಂಜುನಾಥ್ ಇತರರಿದ್ದರು.
Published on
ಹೊಳೆಹೊನ್ನೂರು: ಆಹಾರದಲ್ಲಿ ಕಲಬೆರಕೆ ತಡೆಗಟ್ಟುವ ಉದ್ದೇಶದಿಂದ ಅನಧಿಕೃತ ಆಹಾರ ತಯಾರಿಕೆ ಹಾಗೂ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾ ಮಟ್ಟದ ಆಹಾರ ಸುರಕ್ಷತೆ ಅಧಿಕಾರಿ, ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಹೇಳಿದರು.
ಪಟ್ಟಣದ ವಿವಿಧೆಡೆ ಬೇಕರಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಮಾತನಾಡಿ, ಆಹಾರದ ಗುಣಮಟ್ಟ ಕಾಪಾಡುವುದು, ಕಳಪೆ ಆಹಾರ ಪದಾರ್ಥಗಳ ಮಾರಾಟ ತಡೆಯುವುದು ಅತ್ಯಂತ ಮುಖ್ಯ. ಆಹಾರ ಸುರಕ್ಷತಾ ನಿಯಮ ಪಾಲನೆಗೆ ಸಂಬಂಧಿಸಿ ಆಹಾರ ವ್ಯಾಪಾರಿಗಳು ಮತ್ತು ತಯಾರಕರು ಪರವಾನಗಿ ಪಡೆಯಬೇಕು ಎಂದು ತಿಳಿಸಿದರು.
ಅವಧಿ ಮೀರಿದ ವಸ್ತುಗಳನ್ನು ಮಾರಾಟ ಮಾಡುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ ಅಪರಾಧ. ಪಟ್ಟಣದಲ್ಲಿ ಕೆಲ ಬೇಕರಿಗಳನ್ನು ಪರಿಶೀಲಿಸಿದಾಗ ನಿಯಮ ಉಲ್ಲಂಘನೆ ಆಗಿರುವುದು ಕಂಡುಬಂದಿದ್ದು, ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದರು.
ಉಪತಹಸೀಲ್ದಾರ್ ಎಸ್.ವಿಜಯ್, ಕಂದಾಯ ನಿರೀಕ್ಷಕ ರಾಜು, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ಕಲ್ಯಾಣಿ ಬಸವರಾಜ್, ಅಣ್ಣಪ್ಪಾಚಾರಿ ಹಾಗೂ ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net