ಆಕಾಶ, ಗಾಳಿ, ವಾಯು, ಅಗ್ನಿ, ನೀರು, ಭೂಮಿ, ಭೂಮಿಯಿಂದ ವೃಕ್ಷ, ಆಹಾರ ಪದಾರ್ಥಗಳು ಹುಟ್ಟಿಕೊಂಡವು. ಈ ಆಹಾರವನ್ನು ಬಳಸಿಕೊಳ್ಳಲು ಮನುಷ್ಯನನ್ನು ದೇವರು ಸೃಷ್ಟಿಸಿದ ಎಂಬ ನಂಬಿಕೆ ನಮ್ಮದು. ಆದರೆ ಇಂದು ಮನುಷ್ಯ ಪ್ರಕೃತಿ ಇರುವುದೇ ತನ್ನ ಅವಶ್ಯಕತೆ ಪೂರೈಸಲು ಎಂಬಂತೆ ವರ್ತಿಸುತ್ತಿದ್ದಾನೆ. ವೇದಗಳು, ತಿಥಿ, ನಕ್ಷತ್ರಗಳ ಲೆಕ್ಕಾಚಾರ ನಡೆಯುವುದೂ ವಿಜ್ಞಾನದ ಆಧಾರದಲ್ಲೇ. ಗ್ರಹಣ ಕಾಲ, ಅಧಿಕಮಾಸ, ಶೂನ್ಯ ಮಾಸ ಎಲ್ಲವೂ ನಿರ್ಣಯ ಮಾಡುವುದಕ್ಕೆ ವೈಜ್ಞಾನಿಕ ತಳಹದಿಯಿದೆ ಎಂದು ಡಾ. ವಿದ್ಯಾಶಂಕರ ಹೇಳಿದರು.