13ರಂದು ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಟಿ.ಡಿ.ಮೇಘರಾಜ್, ಶ್ಯಾಮಲಾ ರವಿ ಹೆಗಡೆ ಮತ್ತಿತರರು ಭಾಗವಹಿಸುವರು. ವಿದುಷಿ ರಾಜಲಕ್ಷ್ಮೀ ಕಾನುಗೋಡು ಅವರಿಂದ ಭರತನಾಟ್ಯ, ವಿದ್ವಾನ್ ಜಿ.ಬಿ.ಜನಾರ್ದನ್ ಸಾಹಿತ್ಯ, ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ನಳ ದಮಯಂತಿ ನೃತ್ಯರೂಪಕ ಇರುತ್ತದೆ. ಅರ್ಜುನ್ ಭಾರದ್ವಾಜ್, ಡಾ. ಕರುಣಾ, ರಾಜಗೋಪಾಲ ಭಾಗವತ್, ಪೂರ್ಣಿಮಾ ಅವರಿಗೆ ಸಾಂಸ್ಕೃತಿಕ ಸಾರಥಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಐ.ವಿ.ಹೆಗಡೆ, ವರದಾ ಜನಾರ್ದನ್, ಕಾವ್ಯಾ ಸುದ್ದಿಗೋಷ್ಠಿಯಲ್ಲಿದ್ದರು.