ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸಿ | Rajyotsava celebration

ಸೊರಬದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಪ್ಪುಸೇನೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಹರತಾಳು ಹಾಲಪ್ಪ, ಅರ್.ವಿಜಯ್‌ಕುಮಾರ್, ಪ್ರವೀಣ್, ವಸಂತ, ಡಾ. ಎಂ.ಕೆ.ಭಟ್ ಇತರರಿದ್ದರು.
ಸೊರಬದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಪ್ಪುಸೇನೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಹರತಾಳು ಹಾಲಪ್ಪ, ಅರ್.ವಿಜಯ್‌ಕುಮಾರ್, ಪ್ರವೀಣ್, ವಸಂತ, ಡಾ. ಎಂ.ಕೆ.ಭಟ್ ಇತರರಿದ್ದರು.
Published on
ಸೊರಬ: ಕನ್ನಡ ಭಾಷೆ ಅತ್ಯಂತ ಶ್ರೀಮಂತ ಮಾತೃಭಾಷೆ. ರಾಜ್ಯೋತ್ಸವ ಆಚರಣೆಗೆ ಸೀಮಿತವಾಗದೆ ಮಾತನಾಡುವ ಭಾಷೆಯಾಗಲಿ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಪ್ಪು ಸೇನೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಅಪ್ಪು ಸೇನೆಯ 4ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ಮಾತನಾಡುವ ಮೂಲಕ ಭಾಷೆ ಉಳಿಸಬೇಕು ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕನ್ನಡಕ್ಕೆ ಕಂಟಕ ಎದುರಾದಾಗ ಕನ್ನಡ ಪರ ಸಂಘಟನೆಗಳು ಸಂಘಟಿತವಾಗಿ ಹೋರಾಡುವ ಮೂಲಕ  ಶಕ್ತಿ ತುಂಬುವ ಕೆಲಸ ಮಾಡುತ್ತ ಬಂದಿವೆ. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್‌ಗೆ ಸೀಮಿತವಾಗದೆ ನಿತ್ಯ ಆಚರಣೆ ಆಗಬೇಕು ಎಂದು ತಿಳಿಸಿದರು.
ನಮ್ಮ ಭಾವನೆಗಳು ಯಾವಾಗಲೂ ಕನ್ನಡದ ಪರವಾಗಿರಬೇಕು. ನಮ್ಮ ಸರ್ಕಾರ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ವಿಧಾನಸೌಧದ ಎದುರು ಭುವನೇಶ್ವರಿ ದೇವಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಾಡು, ನುಡಿಗೆ ಧಕ್ಕೆಯಾದಾಗ ಸಂಘಟಿತರಾಗಿ ಹೋರಾಡಬೇಕು ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಕನ್ನಡದ ಹಬ್ಬಗಳು ನಿರಂತರವಾಗಿ, ದಿನ ದಿನವೂ ಹಬ್ಬಗಳ ರೀತಿ ನಡೆಯುತ್ತಿರಲಿ ಎಂದಿದ್ದಾರೆ. ಕದಂಬರಿಂದ ಕೆಳದಿ ಸಂಸ್ಥಾನದ ರಾಣಿಯ ಆಳ್ವಿಕೆ, ಕೋಟಿಪುರದ ದೇವಾಲಯಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಬೆಂಗಳೂರಿನ ಕನ್ನಡ ಭವನ, ಕುವೆಂಪು ವಿಶ್ವವಿದ್ಯಾಲಯ ನಾಡಿನ ಇತಿಹಾಸ ಸಾರುತ್ತವೆ. ಕರ್ನಾಟಕದಲ್ಲಿ ಕನ್ನಡಕ್ಕೆ ಕುಂದು ತರುವ ಕೆಲಸವಾಗುತ್ತಿದೆ. ಎಲ್ಲವನ್ನೂ ಹಿಮ್ಮೆಟ್ಟಿಸಿ, ಕನ್ನಡವನ್ನು ಉಳಿಸಿ ಬೆಳೆಸಬೇಕು.
ಅಪ್ಪು ಸೇನೆ ಅಧ್ಯಕ್ಷ ಅರ್.ವಿಜಯ್‌ಕುಮಾರ್, ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ವಸಂತ, ಡಾ. ಎಂ.ಕೆ.ಭಟ್, ಉಪನ್ಯಾಸಕ ರವಿಕುಮಾರ್, ಯುವರಾಜ್, ಮಂಜುನಾಥ್ ಉಪ್ಪಳ್ಳಿ, ಕೆ.ಅಜ್ಜಪ್ಪ, ಕೃಷ್ಣಮೂರ್ತಿ, ಪುಟ್ಟರಾಜು, ರಾಮಪ್ಪ, ತಿಮ್ಮೇಗೌಡ, ಸಂತೋಷ್, ಅಜಿತ್‌ಕುಮಾರ್, ಅರುಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net