ಇಂದಿನ ಸನ್ನಿವೇಶದಲ್ಲಿ ಮೊಬೈಲ್ ರೀಲ್ಸ್‌ಗಳು, ಹಾಸ್ಯ ಕಾರ್ಯಕ್ರಮಗಳು, ಸಾಮಾಜಿಕ ಜಾಲತಾಣಗಳು ಎಲ್ಲ ಕಡೆಯೂ ಹಾಸ್ಯ ಹರಿದು ಬರುತ್ತಿದೆ. ಆದರೆ ಇದರ ಗುಣಮಟ್ಟ ಎಷ್ಟು ಎಂಬುದನ್ನು ನಾವು ಅರಿತುಕೊಳ್ಳುವುದು ಒಳಿತು. ಯಾವುದೇ ಸಾಹಿತ್ಯ ವ್ಯಕ್ತಿಯ ಬುದ್ಧಿಗೆ ಪ್ರೇರಣೆ ನೀಡುವಂತಿರಬೇಕು. ಜತೆಗೆ ಮನಸ್ಸಿಗೆ ರಂಜನೆ ನೀಡಬೇಕು. ಇವರೆಡರ ಜತೆಗೆ ಸಮಾಜ ಸುಧಾರಣೆಗೆ ಪೂರಕ ಆಗಿರಬೇಕು ಎಂದು ವೈ.ವಿ.ಗುಂಡೂರಾವ್ ಅಭಿಪ್ರಾಯಪಟ್ಟರು.