ಯೋಗಾಸನ ಸ್ಪರ್ಧೆಗೆ ವಿವಿ ತಂಡ ಆಯ್ಕೆ

ಯೋಗಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಕೃಷಿ ವಿವಿ ತಂಡ.
ಯೋಗಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಕೃಷಿ ವಿವಿ ತಂಡ.
Published on
ಆನಂದಪುರ: ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿವಿ ವಿದ್ಯಾರ್ಥಿಗಳು ಮೊದಲ ಬಾರಿಗೆ ದಣ ಭಾರತ ವಲಯದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜ.5 ರಿಂದ ಬೆಂಗಳೂರಿನಲ್ಲಿ ಸ್ಪರ್ಧೆ ನಡೆಯಲಿದ್ದು ಬಾಲಕಿಯರಾದ ಬಿ.ನಿವೇದಿತಾ, ಪಿ.ಅತಾ, ಜಿ.ಸಿ.ಅನು, ಬಿ.ಜಿ.ಕುಸುಮಾ, ಬಿ.ಆರ್​.ದೀನಾ, ಎಚ್​.ಪಿ. ವರ್ಷಾ, ಪೂಜಾ, ಜೆ.ವೈಭವಿ ಯೋಗ ಪ್ರದರ್ಶನ ನೀಡಲಿದ್ದಾರೆ. ವಿವಿಯ ಪ್ರಾಧ್ಯಾಪಕ ಎಂ.ಯಲ್ಲಪ್ಪ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು ಕುಲಪತಿ ಡಾ. ಆರ್​.ಸಿ.ಜಗದೀಶ್​ ಮಾರ್ಗದರ್ಶನ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net