ಥ್ರೋಬಾಲ್‌ನಲ್ಲಿ ಉಡುಪಿ ಕಾಲೇಜು ಪ್ರಥಮ

ತ್ಯಾಗರ್ತಿ ಸಮೀಪದ ಉಳ್ಳೂರು ಸಿಗಂದೂರೇಶ್ವರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾನೂನು ವಿವಿ ಅಂತರ ಕಾಲೇಜು ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದ ಉಡುಪಿಯ ವೈಕುಂಠ ಬಾಳಿಗಾ ಕಾಲೇಜು ವಿದ್ಯಾರ್ಥಿನಿಯರು.
ತ್ಯಾಗರ್ತಿ ಸಮೀಪದ ಉಳ್ಳೂರು ಸಿಗಂದೂರೇಶ್ವರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾನೂನು ವಿವಿ ಅಂತರ ಕಾಲೇಜು ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದ ಉಡುಪಿಯ ವೈಕುಂಠ ಬಾಳಿಗಾ ಕಾಲೇಜು ವಿದ್ಯಾರ್ಥಿನಿಯರು.
Published on
ತ್ಯಾಗರ್ತಿ: ಸಮೀಪದ ಉಳ್ಳೂರು ಸಿಗಂದೂರೇಶ್ವರಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ವಿವಿ ಅಂತರ ಕಾಲೇಜು ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಉಡುಪಿಯ ವೈಕುಂಠ ಬಾಳಿಗಾ ಕಾಲೇಜು ಹಾಗೂ ಟೆನ್ನಿಕಾಯ್ಟಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ಕೆಎಸ್‌ಎಲ್‌ಯು ಲಾ ಕಾಲೇಜಿನ ವಿದ್ಯಾರ್ಥಿನಿಯರು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು.
ಥ್ರೋಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ಎಸ್‌ಡಿಎಂ ಲಾ ಕಾಲೇಜು ದ್ವಿತೀಯ, ಬೆಂಗಳೂರು ಬಿಎಂಎಸ್ ಲಾ ಕಾಲೇಜು ತೃತೀಯ ಹಾಗೂ ಎಂಕೆಪಿಎಂಆರ್‌ವಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನಾಲ್ಕನೇ ಸ್ಥಾನ ಪಡೆದಿದೆ.
ಟೆನ್ನಿಕಾಯ್ಟಿನಲ್ಲಿ ಕೆಪಿಇಎಸ್‌ಜಿಎಂ ಪಾಟೀಲ್ ಕಾನೂನು ಕಾಲೇಜು ದ್ವಿತೀಯ ಸ್ಥಾನ, ತುಮಕೂರು ವಿದ್ಯೋದಯ ಕಾನೂನು ಕಾಲೇಜು ತೃತೀಯ ಹಾಗೂ ಹಾಸನದ ಸರ್ಕಾರಿ ಕಾನೂನು ಕಾಲೇಜಿನ ವಿದ್ಯಾರ್ಥಿನಿಯರು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚಿನ ಕಾನೂನು ಕಾಲೇಜಿನ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಬಿಳಗಲ್ಲೂರು, ಕಾರ್ಯದರ್ಶಿ ಕೆ.ಮಮತಾ, ಹುಬ್ಬಳ್ಳಿ ಕಾನೂನು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಾಲಿದ್ ಖಾನ್, ಪ್ರಾಚಾರ್ಯ ವಿ.ಎಸ್.ವಿನಯ್, ಉಪನ್ಯಾಸಕರಾದ ಜ್ಯೋತಿ, ರೇವತಿ ಹೆಗಡೆ, ಚಿದಾನಂದ, ಮಂಜೋಜಿ ರಾವ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net