ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ವಿನೋಬನಗರ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವ, ಡಿವೈಎಸ್‌ಪಿ ಟಿ.ಸಂಜೀವ್‌ಕುಮಾರ್ ಮಾರ್ಗದರ್ಶನ, ಇನ್‌ಸ್ಪೆಕ್ಟರ್ ಡಿ.ಕೆ.ಸಂತೋಷಕುಮಾರ್ ಉಸ್ತುವಾರಿಯಲ್ಲಿ ಪಿಎಸ್‌ಐ ಜಿ.ತಿರುಮಲೇಶ್ ಮತ್ತು ಸಿಬ್ಬಂದಿಗಳಾದ ಕೆ.ಆರ್.ರಾಜು, ಮನುಶಂಕರ, ಎಸ್.ಜಿ.ಮಲ್ಲಪ್ಪ, ಎನ್.ಕೆ.ಅರುಣಕುಮಾರ್ ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದೆ.