ಶಿವಮೊಗ್ಗ: ಶಂಕರಘಟ್ಟ ಸಮೀಪದ ಕುವೆಂಪುನಗರದ ಬಳಿ ಶಿವಮೊಗ್ಗ-ತರಿಕೆರೆ ರಾಜ್ಯ ಹೆದ್ದಾರಿ(State Highway)ಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ 1.50 ಲಕ್ಷ ರೂ. ಮೌಲ್ಯದ ಬಂಗಾರ ಸರ ದರೋಡೆ(Robbery) ಮಾಡಿದ್ದ ಇಬ್ಬರನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಮಲ್ಲಿಗೇನಹಳ್ಳಿ ಕ್ಯಾಂಪ್(Malligenahalli Camp)ನ ಚಂದನ್ ನಾಯ್ಕ(20) ಮತ್ತು ವೇಣುಗೋಪಾಲ(26) ಬಂಧಿತರು. ಅವರಿಂದ ಸುಲಿಗೆ ಮಾಡಿದ 10 ಗ್ರಾಂ ಬಂಗಾರದ ಸರ, ಬೈಕ್‌ನನ್ನು ಜಪ್ತಿ ಮಾಡಿದ್ದಾರೆ. ಕಳೆದ ಶುಕ್ರವಾರ ಜಯಂತ್ ಅವರು ಕುವೆಂಪುನಗರ ಗ್ರಾಮದ ಹತ್ತಿರ ತೆರಳುತ್ತಿದ್ದಾಗ ಚಂದನ್‌ನಾಯ್ಕ ಮತ್ತು ವೇಣುಗೋಪಾಲ ಬೈಕ್(Baik) ಅಡ್ಡಗಟ್ಟಿ ಬೆದರಿಸಿ ಚಿನ್ನದ ಸರ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭದ್ರಾವತಿ ಡಿವೈಎಸ್‌ಪಿ(DYSP) ಪ್ರಕಾಶ ರಾಠೋಡ್ ಮೇಲ್ವಿಚಾರಣೆಯಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಚಿದಾನಂದ ನೇತೃತ್ವದಲ್ಲಿ ಎಎಸ್‌ಐ(ASI) ದಿವಾಕರ್ ರಾವ್, ಸಿಪಿಸಿ(CPC) ಯದುನಂದನ, ಸಂತೋಷಕುಮಾರ ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದೆ.