ಹೊಸ ಉದ್ಯೋಗ ಆರಂಭಿಸಲು ಪ್ರಯತ್ನಿಸಿ

ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಹೊಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಅಜಯ್‌ಕುಮಾರ್, ಜಯಶ್ರೀ, ಸೌಮ್ಯಾ ಇತರರಿದ್ದರು.
ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಹೊಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಅಜಯ್‌ಕುಮಾರ್, ಜಯಶ್ರೀ, ಸೌಮ್ಯಾ ಇತರರಿದ್ದರು.
Published on
ಹೊಳೆಹೊನ್ನೂರು: ತರಬೇತಿ ಪಡೆದ ಮಹಿಳೆಯರು ಹೊಸ ಉದ್ಯೋಗ ಆರಂಭಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಅಜಯ್‌ಕುಮಾರ್ ಹೇಳಿದರು.
ನಿಂಬೆಗೊಂದಿಯಲ್ಲಿ ಎಸ್‌ಕೆಡಿಆರ್‌ಪಿ ಸಹಯೋಗದಲ್ಲಿ ಆಯೋಜಿಸಿದ್ದ ಸ್ಫೂರ್ತಿ ಜ್ಞಾನ ವಿಕಾಸ ಕೇಂದ್ರದ 3 ತಿಂಗಳ ಟೈಲರಿಂಗ್ ತರಬೇತಿ ಸಮಾರೋಪದಲ್ಲಿ ಮಾತನಾಡಿ, ಸಾರ್ವಜನಿಕ ವಲಯದಲ್ಲಿ ಗುಣಮಟ್ಟದ ಸೇವೆ ನೀಡಬೇಕು. ನವೀನ ವಿನ್ಯಾಸಗಳನ್ನು ನೀಡುವತ್ತ ಗಮನಹರಿಸಬೇಕು ಎಂದರು.
ಒಕ್ಕೂಟದ ಅಧ್ಯಕ್ಷೆ ಜಯಶ್ರೀ, ಸಮನ್ವಯಾಧಿಕಾರಿ ಸೌಮ್ಯಾ, ಅಶೋಕ್‌ಕುಮಾರ್, ಸುನೀತಾ, ಬಸಮ್ಮ, ಮಲ್ಲಿಕಾರ್ಜುನ, ರೂಪಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net