ಶಿಕಾರಿಪುರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಗಳ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ರಾಷ್ಟ್ರೀಯ ಸಹಕಾರ ಯೂನಿಯನ್ ನಿರ್ದೇಶಕ ಅಗಡಿ ಅಶೋಕ್ ಉದ್ಘಾಟಿಸಿದರು. ಡಾ. ಬಿ.ಡಿ.ಭೂಕಾಂತ್, ಹನುಮಂತಪ್ಪ, ಶಿವಶಂಕರಪ್ಪ, ಎಚ್.ಬಿ.ದಿನೇಶ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾರ್ಯದರ್ಶಿಗಳಿಗೆ ಕಾರ್ಯಾಗಾರ
ಅಗಡಿ ಅಶೋಕ್ ಹೇಳಿಕೆ
ಸಹಕಾರ ಸಂಗಳ ಏಳಿಗೆಗೆ ತರಬೇತಿ ಪೂರಕ
ಶಿಕಾರಿಪುರ: ರಾಷ್ಟ್ರಮಟ್ಟದಿಂದ ತಾಲೂಕು ಮಟ್ಟದವರೆಗೆ ಸಹಕಾರ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ. ನೌಕರರ ಮತ್ತು ಸಂಗಳ ಶ್ರೇಯೋಭಿವೃದ್ಧಿಗೆ ತರಬೇತಿ ಪೂರಕವಾಗಿದೆ ಎಂದು ರಾಷ್ಟ್ರೀಯ ಸಹಕಾರ ಯೂನಿಯನ್ ನಿರ್ದೇಶಕ ಅಗಡಿ ಅಶೋಕ್ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಶಿವಮೊಗ್ಗ ಸಹಕಾರ ಇಲಾಖೆ ಆಶ್ರಯದಲ್ಲಿ ಶಿಕಾರಿಪುರದ ದಿ ಅರ್ಬನ್ ಕೋ&ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಗಳ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಗಳ ಕಾರ್ಯದರ್ಶಿಗಳು ಯಾವುದೇ ಲಾಪೇೆಯಿಲ್ಲದೆ ಶ್ರಮಿಸುತ್ತಿದ್ದಾರೆ. ಸಂದ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯದರ್ಶಿಗಳು ಶ್ರಮಿಸುತ್ತಿರುವುದು ಶ್ಲಾನೀಯ ಎಂದರು.
ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯ ಸಿ.ಹನುಮಂತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 590 ಹಾಲು ಉತ್ಪಾದಕರ ಸಹಕಾರ ಸಂಗಳಿವೆ. ಶಿಕಾರಿಪುರ ತಾಲೂಕಿನಲ್ಲಿ 130 ಸಂಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ತಾಲೂಕು ಎಂಬ ಹೆಗ್ಗಳಿಕೆ ಶಿಕಾರಿಪುರಕ್ಕೆ ಸಲ್ಲುತ್ತದೆ. ಇದರ ಶ್ರೇಯಸ್ಸು ಹಾಲು ಉತ್ಪಾದಕರ ಸಹಕಾರ ಸಂಗಳ ಕಾರ್ಯದರ್ಶಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಶಿವಶಂಕರಪ್ಪ ಮಾತನಾಡಿ, ಸಹಕಾರ ೇತ್ರದಲ್ಲಿ ಜಾತಿ, ರಾಜಕೀಯ ಮುಕ್ತ ಸೇವೆ ಮೂಡಿಬಂದಾಗ ಮಾತ್ರ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಿರ್ದೇಶಕ ದಯಾನಂದ ಗೌಡ ಮಾತನಾಡಿ, ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕಾರ್ಯಾಗಾರಗಳು ಅಗತ್ಯ ಎಂದು ತಿಳಿಸಿದರು.
ಸಹಕಾರಿಗಳಾದ ಎಚ್.ಬಿ.ದಿನೇಶ್ ಬುಳ್ಳಾಪುರ, ಎಚ್.ಎಸ್.ಮಲ್ಲಣ್ಣಗೌಡ, ಡಿ.ಎಲ್.ಬಸವರಾಜ್, ಹರೀಶ್ ಆರ್. ಕರೇಗೌಡರು, ನಿವೃತ್ತ ಸಹಾಯಕ ವ್ಯವಸ್ಥಾಪಕ ಶಿವಾನಂದ ಇತರರಿದ್ದರು.