ಆನೆಗಳ ಉಪಟಳಕ್ಕೆ ಕಡಿವಾಣ ಹಾಕಿ | Farmers protest

ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಬಿಜೆಪಿ, ರೈತ ಸಂಘ, ವಿವಿಧ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ಹರತಾಳು ಹಾಲಪ್ಪ, ವೀರೇಶ್ ಆಲುವಳ್ಳಿ, ಎನ್.ವರ್ತೇಶ್, ಆರ್.ಎ.ಚಾಬುಸಾಬ್, ಎನ್.ಸತೀಶ್ ಇತರರಿದ್ದರು.
ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಬಿಜೆಪಿ, ರೈತ ಸಂಘ, ವಿವಿಧ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ಹರತಾಳು ಹಾಲಪ್ಪ, ವೀರೇಶ್ ಆಲುವಳ್ಳಿ, ಎನ್.ವರ್ತೇಶ್, ಆರ್.ಎ.ಚಾಬುಸಾಬ್, ಎನ್.ಸತೀಶ್ ಇತರರಿದ್ದರು.
Published on
ರಿಪ್ಪನ್‌ಪೇಟೆ: ಕಾಡಾನೆಗಳ ಉಪಟಳ ಕಡಿಮೆಯಾಗಲು, ಅವುಗಳನ್ನು ಸೆರೆಹಿಡಿದು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಬಿಜೆಪಿ, ಜೆಡಿಎಸ್ ಪ್ರಮುಖರು, ರೈತರು ಅರಸಾಳು ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳೆಗಳಿಗೆ ಬರುತ್ತಿರುವ ನಾನಾ ರೀತಿಯ ರೋಗಗಳಿಂದ ರೈತರು ನಲುಗಿದ್ದಾರೆ. ಅರಣ್ಯ ಸಮಸ್ಯೆ ಪರಿಹಾರ ಕಾಣದೆ ತೋಳಲಾಡುತ್ತಿರುವ ಸಂದರ್ಭದಲ್ಲಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಆನೆಗಳು ನಾಶಮಾಡುತ್ತಿವೆ. ಇದರಿಂದ ಜನ ರೋಸಿಹೋಗಿದ್ದಾರೆ. ಅರಣ್ಯಾಧಿಕಾರಿಗಳು ಪರಿಸ್ಥಿತಿಯ ಗಂಭೀರತೆ ಅರಿತು, ರೈತರ ಆಕ್ರೋಶ ಕಟ್ಟೆ ಒಡೆಯುವ ಮುನ್ನ ಸೂಕ್ತ ಪರಿಹಾರ ಕಲ್ಪಿಸಿ ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಜನರು ಅತಂತ್ರರಾಗಿದ್ದು, ತಾಳ್ಮೆಗೆಡುವ ಸ್ಥಿತಿಗೆ ಬಂದಿದ್ದಾರೆ. ಕೂಡಲೆ ಆನೆಗಳನ್ನು ಈ ಭಾಗದಿಂದ ಓಡಿಸಿ. ಪುನಃ ಇಲ್ಲಿಗೆ ಬಾರದಂತೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ರೈತರ ಶಾಂತಿಯನ್ನು ದುರ್ಬಲವೆಂದು ಭಾವಿಸಬೇಡಿ ಸಹನೆ ಮೀರಿದರೆ ಅರಣ್ಯದಲ್ಲಿ ಇಲಾಖೆ ಸಿಬ್ಬಂದಿಯನ್ನು ಮರಕ್ಕೆ ಕಟ್ಟಿ ಹಾಕ್ತೀವಿ ಎಂದರು.
ಟಿ.ಡಿ.ಮೇಘರಾಜ್ ಮಾತನಾಡಿ, ಸರ್ಕಾರಕ್ಕೆ ರೈತರ ಸಮಸ್ಯೆ ಬಗೆಹರಿಸಿ ಎಂದರೆ ಬೆಂಗಳೂರಿನಲ್ಲಿ ಸರ್ಕಾರ ಶಾಸಕರ ಖರೀದಿ ಕೇಂದ್ರವನ್ನು ತೆರೆದು ವ್ಯಾಪಾರಕ್ಕೆ ಕುಳಿತಿದ್ದಾರೆ ಎಂದು ಟೀಕಿಸಿದರು.
ರೈತ ಕಳಸೆ ಗಂಗಾಧರ ಮಾತನಾಡಿ, ಕಾಡಾನೆಗಳು ರೈತರ ಜೀವ ಹಾನಿ ಮಾಡಿದರೆ 15 ಲಕ್ಷ ರೂ. ಪರಿಹಾರ ನೀಡುತ್ತೀರಿ. ಹಾಗೆಯೇ ನಾವು ಆನೆಯನ್ನು ಸಾಯಿಸಿ,  20 ಲಕ್ಷ ರೂ. ಪರಿಹಾರ ನಿಮಗೆ ಕೊಡುತ್ತೇವೆ. ನಮಗೆ ಬದುಕಲು ಅವಕಾಶ ಕೊಡಿ ಎಂದು ಅಸಹನೆ ವ್ಯಕ್ತಪಡಿಸಿದರು.

ಉಡಾಫೆ ಬಿಟ್ಟು ಆನೆ ಓಡಿಸಿ

ರೈತರನ್ನು ಕಡೆಗಣಿಸುವ ಸರ್ಕಾರ ಮತ್ತು ಅಧಿಕಾರಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಈ ಸರ್ಕಾರದಲ್ಲಿ ಮಂತ್ರಿ ನೀಡಬೇಕಿದ್ದ ಪತ್ರಿಕಾ ಹೇಳಿಕೆಯನ್ನು ಅಧಿಕಾರಿಯೊಬ್ಬ ಹೇಳುವಂತಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು. ಸಿಸಿಎ್ ಹನುಮಂತಪ್ಪ ಅವರು ಅದು ಹೇಗೆ ರೈತರನ್ನು ತೆರವುಗೊಳಿಸುತ್ತೇನೆ ಎಂದು ರೀಲ್ ಮಾಡಿದ್ದಾರೆ? ನಮ್ಮ ಸರ್ಕಾರ ಇದ್ದಿದ್ದರೆ ಆತನನ್ನು ಸಸ್ಪೆಂಡ್ ಮಾಡುತ್ತಿದ್ದೆವು. ಉಡಾಫೆಯನ್ನು ಬಿಟ್ಟು ತಕ್ಷಣ ಆನೆ ಓಡಿಸಿ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಸ್ವಾಮಿ ರಾವ್, ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ, ಜೆಡಿಎಸ್‌ನ ಎನ್.ವರ್ತೇಶ್, ಆರ್.ಎ.ಚಾಬುಸಾಬ್, ಮುಖಂಡರಾದ ಎನ್.ಸತೀಶ್, ಬೆಳಗೋಡು ಗಣಪತಿ, ಶಿವಾನಂದ, ಬೆಳ್ಳೂರು ತಿಮ್ಮಪ್ಪ, ಸರಸ್ವತಿ, ಸುರೇಶ್ ಸಿಂಗ್, ನಾಗರ್ಜುನ ಸ್ವಾಮಿ, ಇನ್ನಿತರರಿದ್ದರು.
"

ಈಗಾಗಲೇ ಆನೆ ಓಡಿಸುವ ಕಾರ್ಯ ಪ್ರಗತಿಯಲ್ಲಿದೆ. ಆನೆಯ ಚಲನವಲನದ ಮಾಹಿತಿ ಪಡೆಯಲು ಮತ್ತು ಹಿಮೆಟ್ಟಿಸಲು ಎರಡು ಕ್ಯಾಂಪ್ ಕಾರ್ಯನಿರ್ವಹಿಸುತ್ತಿವೆ. ಮಂಜರಿಕೊಪ್ಪದ ಟ್ರಂಚ್ ದುರಸ್ತಿ ಮಾಡಿಸಲಾಗುವುದು. ಆನೆ ಬರುವ ದಾರಿಯಲ್ಲಿ ಸೋಲಾರ್ ಫೆನ್ಸಿಂಗ್ ನಿರ್ಮಿಸಿ ಆನೆಗಳ ಸಂಚಾರ ನಿರ್ಬಂಧಕ್ಕೆ ಕ್ರಮ ವಹಿಸಲಾಗುವುದು.

— ಪ್ರಸನ್ನ ಕೃಷ್ಣ ಪಟಗಾರ ಡಿಸಿಎ್


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net