ನೆಹರು ಮೈದಾನದ ಅಭಿವೃದ್ಧಿಗೆ ಚಿಂತನೆ

ಸಾಗರದ ನೆಹರು ಮೈದಾನದಲ್ಲಿ 70 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಎಚ್.ಕೆ.ನಾಗಪ್ಪ, ಶಾಂತರಾಮ್, ಡಾ. ಅ.ರಾ.ಲಂಬೋಧರ್ ಇತರರಿದ್ದರು.
ಸಾಗರದ ನೆಹರು ಮೈದಾನದಲ್ಲಿ 70 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಎಚ್.ಕೆ.ನಾಗಪ್ಪ, ಶಾಂತರಾಮ್, ಡಾ. ಅ.ರಾ.ಲಂಬೋಧರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ
  • ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
ಸಾಗರ: ನೆಹರು ಮೈದಾನದ ಸಮಗ್ರ ಅಭಿವೃದ್ಧಿಗೆ 70 ಲಕ್ಷ ರೂ. ಅನುದಾನವನ್ನು ಮೊದಲ ಹಂತದಲ್ಲಿ ವಿನಿಯೋಗಿಸಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ನೆಹರು ಮೈದಾನದಲ್ಲಿ ನಗರಸಭೆಯಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ 70 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ರಂಗಮಂದಿರದ ಅಗತ್ಯವಿದ್ದ ಹಿನ್ನೆಲೆಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ, ಡ್ರೆಸ್ಸಿಂಗ್ ರೂಂ, ವಾಕಿಂಗ್ ಪಾಥ್, ಶೌಚಗೃಹ ನಿರ್ಮಿಸಲಾಗುತ್ತಿದೆ. ಸಾಗರದಲ್ಲಿ ಒಳಾಂಗಣ ರಂಗಮಂದಿರ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 4.80 ಲಕ್ಷ ರೂ. ಬಿಡುಗಡೆಯಾಗಲಿದೆ. 3 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನವೀಕರಣ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಸ್ಥಳೀಯ ವಾಯುವಿಹಾರಿಗಳ ಸಂಘದ ಮುತುವರ್ಜಿಯಿಂದ ನೆಹರು ಮೈದಾನಕ್ಕೆ ವಿವಿಧ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ವಾಯುವಿಹಾರಿಗಳ ಸಂಘದ ಶಾಂತಾರಾಮ್, ಡಾ. ಅ.ರಾ.ಲಂಬೋಧರ್, ಐ.ಎನ್.ಸುರೇಶಬಾಬು, ಗಣಪತಿ ಮಂಡಗಳಲೆ, ಸೋಮಶೇಖರ ಲ್ಯಾವಿಗೆರೆ, ದಮಯಂತಿ, ಕಲಸೆ ಚಂದ್ರಪ್ಪ, ಅನ್ವರ್ ಬಾಷಾ, ಕೆ.ವಿ.ಜಯರಾಮ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net