ಚಿಂತನಾ ಮನೋಭಾವ ಶಿಕ್ಷಕರಲ್ಲಿ ಅತ್ಯಗತ್ಯ | Teachers' Day

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಪ್ರಾಚಾರ್ಯ ಡಾ. ಸಿ.ಎಸ್.ಶ್ರೀಧರ, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಡಾ. ವಿಜಯಕುಮಾರ್ ಅವರನ್ನು ಅಭಿನಂದಿಸಲಾಯಿತು. ಎಸ್.ಎನ್.ನಾಗರಾಜ, ಡಾ. ಪಿ.ನಾರಾಯಣ್, ಡಾ. ಎಸ್.ಎನ್.ಶ್ರೀಹರ್ಷ ಇದ್ದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಪ್ರಾಚಾರ್ಯ ಡಾ. ಸಿ.ಎಸ್.ಶ್ರೀಧರ, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಡಾ. ವಿಜಯಕುಮಾರ್ ಅವರನ್ನು ಅಭಿನಂದಿಸಲಾಯಿತು. ಎಸ್.ಎನ್.ನಾಗರಾಜ, ಡಾ. ಪಿ.ನಾರಾಯಣ್, ಡಾ. ಎಸ್.ಎನ್.ಶ್ರೀಹರ್ಷ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ
  • ಜೀವನ ಮೌಲ್ಯಗಳನ್ನು ಬೆಳೆಸುವ ಕೌಶಲ ಶಿಕ್ಷಕರಲ್ಲಿ ಇರಬೇಕು
  • ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿಕೆ
ಶಿವಮೊಗ್ಗ: ತಂತ್ರಜ್ಞಾನ ಮತ್ತು ಎಐ ನೀಡುವ ಮಾಹಿತಿಯನ್ನು ಅಂಧತ್ವದಲ್ಲಿ ಸ್ವೀಕರಿಸದೆ, ವಾಸ್ತವತೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಮನವರಿಕೆಯಾದ ವಿಚಾರಗಳನ್ನು ಸ್ವೀಕರಿಸುವ ಚಿಂತನಾ ಮನೋಭಾವ(Thought fulness) ಶಿಕ್ಷಕರಲ್ಲಿ ಅತ್ಯಗತ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ(National Education Committee)(ಎನ್‌ಇಎಸ್) ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯ(National College of Pharmacy)ದಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ  ಮಾತನಾಡಿದ ಅವರು, ತಂತ್ರಜ್ಞಾನ ನೀಡಲಾಗದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ನೈತಿಕತೆ, ಸ್ಫೂರ್ತಿ ಮತ್ತು ಮಾನವೀಯತೆ ಯಂತಹ ಜೀವನ ಮೌಲ್ಯಗಳನ್ನು ಬೆಳೆಸುವ ಕೌಶಲ ಶಿಕ್ಷಕರಲ್ಲಿ ಇರಬೇಕು ಎಂದರು.
ಮಾಹಿತಿ ನೀಡುವುದು ಮಾತ್ರ ಶಿಕ್ಷಕರ ಕಾರ್ಯವಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿ, ಬದುಕಿನ ದಾರಿಯನ್ನು ತೋರಿಸುವುದು ಶಿಕ್ಷಕರ ನಿಜವಾದ ಕರ್ತವ್ಯ. ವಿದ್ಯಾರ್ಥಿಗಳ ಬದುಕಿನ ಅಂಧಕಾರವನ್ನು ಕಳೆಯುವ ಜ್ಞಾನದ ಬೆಳಕಾಗುವಂತಹ ವ್ಯಕ್ತಿತ್ವ ಶಿಕ್ಷಕರದಾಗಲಿ ಎಂದು ಹಾರೈಸಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿ, ಗುರುವನ್ನು ದೇವರಂತೆ ಪೂಜಿಸುವ ಸಂಸ್ಕಾರ ಮತ್ತು ಪರಂಪರೆ ನಮ್ಮದು. ಜ್ಞಾನವನ್ನು ಬೋಧಿಸುವುದರ ಜತೆಗೆ ಮನುಷ್ಯನೊಳಗಿನ ಮನುಷ್ಯತ್ವವನ್ನು ಜಾಗೃತಗೊಳಿಸಿ, ಸಮಾಜವನ್ನು ಕಟ್ಟುವ ಮಹತ್ತರ ಕಾರ್ಯವನ್ನು ಶಿಕ್ಷಕರು ನಿರಂತರವಾಗಿ ಮಾಡುತ್ತಿದ್ದಾರೆ. ಎಐ ಮನುಷ್ಯನ ಬುದ್ಧಿಮತ್ತೆಯನ್ನು ಬದಲಿಸುವ ತಂತ್ರಜ್ಞಾನ(Technology)ವಾಗಿ ನೋಡುವ ಬದಲು, ಮಾನವನ ಸಾಮರ್ಥ್ಯವನ್ನು ವಿಸ್ತರಿಸಿ, ಜ್ಞಾನ ಮತ್ತು ಸೃಜನಶೀಲತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಸಹಾಯಕ ಶಕ್ತಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಎಸ್.ಎನ್.ಶ್ರೀಹರ್ಷ ಮಾತನಾಡಿ, ತಂತ್ರಜ್ಞಾನ ಮತ್ತು ಡಿಜಿಟಲ್ ಸಾಧನಗಳು ಅಪಾರ ಪ್ರಮಾಣದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುತ್ತಿದ್ದರೂ, ಶಿಕ್ಷಕರ ಸ್ಥಾನವನ್ನು ಅವು ಎಂದಿಗೂ ಸಂಪೂರ್ಣವಾಗಿ ಭರಿಸಲಾರವು ಎಂದರು. ನಿವೃತ್ತ ಪ್ರಾಚಾರ್ಯ ಡಾ. ಸಿ.ಎಸ್.ಶ್ರೀಧರ, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಡಾ. ವಿಜಯಕುಮಾರ್, ಬಿ ಫಾರ್ಮ್ ವಿದ್ಯಾರ್ಥಿನಿ ಜ್ಯೋತಿ ಮಾತನಾಡಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net