ಬಹುಮುಖಿ ಕೃಷಿಯತ್ತ ಚಿಂತನೆ ಮಾಡಿ | Awareness programme

ಸಾಗರದಲ್ಲಿ ಆಯೋಜಿಸಿದ್ದ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಅರಿವು ಕಾರ್ಯಕ್ರಮವನ್ನು ಎಸಿ ವೀರೇಶ್‌ಕುಮಾರ್ ಉದ್ಘಾಟಿಸಿದರು. ಬಿ.ಎಲ್.ಶಿವಪ್ರಕಾಶ್, ವಿ.ವಿ.ಶ್ರೀಧರ್, ಗಣಪತಿ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಅರಿವು ಕಾರ್ಯಕ್ರಮವನ್ನು ಎಸಿ ವೀರೇಶ್‌ಕುಮಾರ್ ಉದ್ಘಾಟಿಸಿದರು. ಬಿ.ಎಲ್.ಶಿವಪ್ರಕಾಶ್, ವಿ.ವಿ.ಶ್ರೀಧರ್, ಗಣಪತಿ ಇತರರಿದ್ದರು.
Published on
ಸಾಗರ: ರೈತರು ಬಹುಮುಖಿ ಬೇಸಾಯದತ್ತ ಗಮನ ಹರಿಸಬೇಕು. ಸಮತೋಲಿತ ರಸಗೊಬ್ಬರ ಬಳಕೆ ಮಾಡುವ ಮೂಲಕ ಕೃಷಿಯಲ್ಲಿ ಮೇಲುಗೈ ಸಾಧಿಸಬೇಕು ಎಂದು ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಹೇಳಿದರು.
ಸಾಗರದ ಸಾಮರ್ಥ್ಯಸೌಧದಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭ ಅವರಲ್ಲಿ ಆತ್ಮಸ್ಥೈರ್ಯ ತುಂಬಿಸುವ ಕೆಲಸವಾಗಬೇಕು. ಸಾಗರ ತಾಲೂಕಿನಲ್ಲಿ ರಸಗೊಬ್ಬರ ಅಂಗಡಿಗಳು ರೈತರ ಬೇಡಿಕೆಗೆ ಸ್ಪಂದಿಸಬೇಕು. ಸರ್ಕಾರದ ನಿಯಮದ ಪ್ರಕಾರ ರಸಗೊಬ್ಬರ, ಬಿತ್ತನೆಬೀಜವನ್ನು ರೈತರಿಗೆ ಪೂರೈಕೆ ಮಾಡುವಂತಾಗಬೇಕು ಎಂದರು.
ಸಾಗರ ತಾಪಂ ಇಒ ಬಿ.ಎಲ್.ಶಿವಪ್ರಕಾಶ್ ಮಾತನಾಡಿ, ರೈತರು ಕಾಲಕಾಲಕ್ಕೆ ಕೃಷಿಗೆ ಸಂಬಂಧಿತ ತರಬೇತಿಗಳಲ್ಲಿ ಪಾಲ್ಗೊಂಡು ಯಶಸ್ವಿ ಕೃಷಿಕರಾಗಬೇಕು. ಸಮತೋಲಿತ ರಸಗೊಬ್ಬರ ಬಳಸುವ ಮೂಲಕ ಅಧಿಕ ಇಳುವರಿ ತೆಗೆಯುವ ಬಗ್ಗೆ ಗಮನ ಹರಿಸಲು ಸಲಹೆ ನೀಡಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ವಿ.ವಿ.ಶ್ರೀಧರ್, ಕಾರ್ಯದರ್ಶಿ ಗಣಪತಿ ಹೆನಗೆರೆ, ಸಿ.ಆರ್.ವೀರಪ್ಪ, ನಿಂಗನ ಗೌಡ, ಕೃಷಿ ಅಧಿಕಾರಿ ಲೋಕೇಶ್, ರವೀಂದ್ರ. ವಿನಾಯಕ ರಾವ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net