ಪ್ರತಿ ಮನೆಯಲ್ಲೂ ಗ್ರಂಥಾಲಯವಿರಲಿ

ಸೊರಬದ ಅಗ್ನಿಶಾಮಕ ಠಾಣೆ ಅವರಣದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯವನ್ನು ಡಾ. ಎಂ.ಕೆ ಭಟ್ ಉದ್ಘಾಟಿಸಿದರು. ಶಂಕರ್ ಶೇಟ್, ಕೆ.ಮಹಾಬಲೇಶ್ವರ್, ಶಂಕರ್, ಡಾ. ಮಹಾಲಿಂಗ ಕೊಳ್ಳೆ ಇತರರಿದ್ದರು.
ಸೊರಬದ ಅಗ್ನಿಶಾಮಕ ಠಾಣೆ ಅವರಣದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯವನ್ನು ಡಾ. ಎಂ.ಕೆ ಭಟ್ ಉದ್ಘಾಟಿಸಿದರು. ಶಂಕರ್ ಶೇಟ್, ಕೆ.ಮಹಾಬಲೇಶ್ವರ್, ಶಂಕರ್, ಡಾ. ಮಹಾಲಿಂಗ ಕೊಳ್ಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಎಂ.ಕೆ.ಭಟ್ ಆಶಯ
  • ಪುಸ್ತಕ ಓದಲು ಪ್ರೋತ್ಸಾಹಿಸಿ
ಸೊರಬ: ಮಕ್ಕಳಲ್ಲಿ ಮೊಬೈಲ್ ಆಕರ್ಷಣೆ ತಪ್ಪಿಸಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಅವಶ್ಯಕ. ಶಿಕ್ಷಣ ಪಡೆಯುವುದರಿಂದ ಹಾಗೂ ಸಾಹಿತ್ಯ ಪುಸ್ತಕಗಳ ಅಧ್ಯಯನದಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಎಂ.ಕೆ.ಭಟ್ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಾಗೃತಿ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಮನೆಯಲ್ಲೂ ಗ್ರಂಥಾಲಯ ಅಗತ್ಯವಿದ್ದು ಮಕ್ಕಳು ಪುಸ್ತಕ ಓದುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಗುರಿಯೊಂದಿಗೆ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಆಯೋಜಿಸುತ್ತಿದ್ದು ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಸುತ್ತದೆ. ಪ್ರತಿದಿನ ಪುಸ್ತಕ ಓದಬೇಕು. ಎಲ್ಲರೂ ಕನ್ನಡ ಪುಸ್ತಕ ಖರೀದಿ ಮಾಡಬೇಕು. ರಾಜ್ಯದಲ್ಲಿ ಒಂದು ಲಕ್ಷ ಮನೆಗೊಂದು ಗ್ರಂಥಾಲಯ ಆರಂಭಿಸಬೇಕು ಎಂಬ ಚಿಂತನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹೊಂದಿದೆ ಎಂದರು.
ಅಗ್ನಿಶಾಮಕ ದಳದ ಠಾಣಾಧಿಕಾರಿ ಕೆ.ಮಹಾಬಲೇಶ್ವರ್, ದೂರದರ್ಶನ ಕಲಾವಿದ ಕೆ.ಪಿ.ರಘುಪತಿ ಕಾರೇಕೊಪ್ಪ ಗೀತಗಾಯನ ನಡೆಸಿಕೊಟ್ಟರು. ಮಕ್ಕಳ ತಜ್ಞ ಡಾ.ಮಹಾಲಿಂಗ ಕೊಳ್ಳೆ, ಶಿರಾಳಕೊಪ್ಪ ಮೆಡಿಲೆನ್ಸ್ ಡಯಾಗ್ನಾಸ್ಟಿಕ್ಸ್ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ಮಹೇಶ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶಂಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net