ಆರಂಭದಿಂದಲೂ ಯೋಜನೆಗೆ ಒಲವು ಹೊಂದಿರುವ ಜಾರ್ಜ್, ಮಲೆನಾಡಿನ ಜನರ ತೀವ್ರ ಪ್ರತಿರೋಧದ ಬಳಿಕವೂ ಈ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಾವತಿ ಪಂಪ್ ಹೌಸ್ ಪ್ರಾಜೆಕ್ಟ್‌ನಲ್ಲಿ ಪಂಪ್ ಹೌಸ್‌ಗೆ 25 ಎಕರೆ ಭೂಮಿ ಬಳಕೆಯಾಗಲಿದೆ. ನೀರನ್ನು ಮೇಲಕ್ಕೆತ್ತಲು ಪೈಪ್‌ಲೈನ್ ಅಳವಡಿಸಿ ಮಣ್ಣು ಮುಚ್ಚಲಾಗುತ್ತದೆ. ಬಳಿಕ ಮತ್ತೆ ಅಲ್ಲಿ ಅರಣ್ಯ ಬೆಳೆಸಲಾಗುತ್ತದೆ ಎಂದರು.