ಅಥರ್ವ ವೇದದ ಬಗ್ಗೆ ಪುರಾಣದಲ್ಲೂ ಉಲ್ಲೇಖ I atharva veda

ಶಿವಮೊಗ್ಗ ಗುಂಡಪ್ಪ ಶೆಡ್‌ನ ಸರ್ವಜ್ಞೇಂದ್ರ ಯಾಗಶಾಲೆಯಲ್ಲಿ ಮಂಗಳವಾರ ಲೋಕಲ್ಯಾಣಾರ್ಥವಾಗಿ ಏರ್ಪಡಿಸಿದ್ದ ಅಥರ್ವಣವೇದ ಸಂಹಿತಯಾಗದ ಪೂರ್ಣಾಹುತಿಯಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿವಮೊಗ್ಗ ಗುಂಡಪ್ಪ ಶೆಡ್‌ನ ಸರ್ವಜ್ಞೇಂದ್ರ ಯಾಗಶಾಲೆಯಲ್ಲಿ ಮಂಗಳವಾರ ಲೋಕಲ್ಯಾಣಾರ್ಥವಾಗಿ ಏರ್ಪಡಿಸಿದ್ದ ಅಥರ್ವಣವೇದ ಸಂಹಿತಯಾಗದ ಪೂರ್ಣಾಹುತಿಯಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ವೇದಗಳ ಉಳಿವು ಇಂದಿನ ತುರ್ತು ಅಗತ್ಯ
  • ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಶಿವಮೊಗ್ಗ : ಅಥರ್ವ (atharva) ವೇದ (vedha) ದ ಬಗ್ಗೆ ಪುರಾಣ, ಇತಿಹಾಸಗಳಲ್ಲಿ ಉಲ್ಲೇಖವಿದೆ. ಇದಕ್ಕೆ ಅದರದ್ದೇ ಆದ ಪ್ರಾಶಸ್ತ್ಯವಿದೆ. ಈಗ ನಮ್ಮ ಬಳಿ ಇರುವ ವೇದಗಳನ್ನು ಉಳಿಸಿಕೊಳ್ಳಲೇಬೇಕೆಂದು ಸೋಂದಾ ಸ್ವರ್ಣವಲ್ಲೀ (swarnavalli) ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಶಿವಮೊಗ್ಗದ ಸ್ವರ್ಣವಲ್ಲಿ ಪರಿಷತ್, ಸ್ವರ್ಣರಶ್ಮಿ ಟ್ರಸ್ಟ್‌ನಿಂದ ಗುಂಡಪ್ಪ ಶೆಡ್‌ನ ಸರ್ವಜ್ಞೇಂದ್ರ ಯಾಗಶಾಲೆಯಲ್ಲಿ ಮಂಗಳವಾರ ಲೋಕಲ್ಯಾಣಾರ್ಥವಾಗಿ ಏರ್ಪಡಿಸಿದ್ದ ಅಥರ್ವಣವೇದ ಸಂಹಿತಯಾಗದ ಪೂರ್ಣಾಹುತಿಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಅಥರ್ವ ಎಂಬುದು ಓರ್ವ ಋಷಿಯ ಹೆಸರು. ಬ್ರಹ್ಮದೇವ ಅಥರ್ವ ಋಷಿಗೆ ಈ ವೇದದ ಬಗ್ಗೆ ಉಪದೇಶ ನೀಡಿದ ಎಂಬ ಪ್ರತೀತಿಯಿದೆ. ಮಂಡೂಕೋಪನಿಷತ್‌ನಲ್ಲಿ ಇದರ ಉಲ್ಲೇಖವಿದೆ. ಅಥರ್ವ ವೇದದಲ್ಲಿ ಅನೇಕ ಶಾಖೆಗಳಿವೆ. ಪರಂಪರೆ ಮುಂದುವರಿಯದ ಕಾರಣ ವೇದದ ಅನೇಕ ಶಾಖೆಗಳು ನಶಿಸಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಶತಮಾನಗಳ ಹಿಂದೆ ಮೊಘಲರು ಸೇರಿದಂತೆ ಅನೇಕರ ದಾಳಿ ಹಾಗೂ ವಿವಿಧ ಕಾರಣಗಳಿಂದ ನಮ್ಮ ವೇದಗಳ ಮೇಲೂ ಪ್ರಹಾರ ನಡೆಯಿತು. ಅದರಿಂದ ಸಾಕಷ್ಟು ಕಳೆದುಕೊಂಡಿದ್ದೇವೆ. ಇನ್ನು ಮುಂದೆ ಇಂತಹ ವೇದಗಳ ನಾಶಕ್ಕೆ ನಾವು ಅವಕಾಶ ನೀಡಬಾರದು ಎಂದು ಹೇಳಿದರು.
ಪ್ರತಿ ವರ್ಷ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಒಂದೊಂದು ವೇದದ ಯಾಗವನ್ನು ಅ.ಪ.ರಾಮಭಟ್ಟರು ನಡೆಸಿಕೊಂಡು ಬರುತ್ತಿದ್ದರು. ಈಗ ಸ್ವರ್ಣರಶ್ಮೀ ಟ್ರಸ್ಟ್‌ನಿಂದಲೂ ಇಂತಹ ಕಾರ್ಯಕ್ರಮ ಆಯೋಜನೆಗೊಂಡಿರುವುದು ಉತ್ತಮ ವಿಚಾರ. ಶಿವಮೊಗ್ಗದಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಧರ್ಮದ ಶ್ರದ್ಧೆ ಇನ್ನಷ್ಟು ಬೆಳೆದು, ಮಳೆ-ಬೆಳೆ ಸಮೃದ್ಧವಾಗಿರಬೇಕು ಎಂದರು.
ಒಂದೇ ಮಗು ಪಡೆಯುವುದು ಶಾಸ್ತ್ರಕ್ಕೂ ವಿರುದ್ಧವಾಗಿದೆ. ಹೆಚ್ಚು ಮಕ್ಕಳನ್ನು ಪಡೆಯಬೇಕೆಂದು ಶಾಸ್ತ್ರ ಹೇಳುತ್ತದೆ. ಅಂತ್ಯ ಕಾಲದಲ್ಲಿ ಶ್ರಾದ್ಧ ಕ್ರಿಯಾದಿಗಳನ್ನು ಮಾಡಲು ಪುತ್ರನ ಅವಶ್ಯಕತೆ ಇದೆ. ಒಂದೇ ಮಗುವಿದ್ದರೆ ಅದು ಹೆಚ್ಚು ಪ್ರೀತಿಯಿಂದ ದಾರಿ ತಪ್ಪುವ ಅಪಾಯವಿದೆ. ಕ್ರಮೇಣ ಪಾಲಕರ ಮಾತನ್ನೂ ಧಿಕ್ಕರಿಸುವುದನ್ನು ನೋಡಿದ್ದೇವೆ. ಇರುವ ಒಂದೇ ಮಗು ಅಕಾಲ ಮೃತ್ಯುವಿಗೆ ತುತ್ತಾದರೆ ಪಾಲಕರ ನೋವು ಹೇಳತೀರದು. ಹೀಗಾಗಿ ದಂಪತಿ ಮೂರು ಮಕ್ಕಳನ್ನು ಹೊಂದಬೇಕೆಂದು ಶ್ರೀಗಳು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net