ಹೊಸನಗರ ತಾಲೂಕಿನ ನಗರದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಎಸ್ಐಆರ್ ಜಾಗೃತಿ ಕಾರ್ಯಾಗಾರದಲ್ಲಿ ಕಿಮ್ಮನೆ ರತ್ನಾಕರ್ ಮಾತನಾಡಿದರು. ಕೆಸ್ತೂರು ಮಂಜುನಾಥ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಸ್ಐಆರ್ ಅರಿವು ಕಾರ್ಯಾಗಾರ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪ
ಎಸ್ಐಆರ್ ಹಿಂದಿದೆ ಕೇಂದ್ರದ ದುರುದ್ದೇಶ
ಹೊಸನಗರ: ಎಸ್ಐಆರ್ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರ ದುರುದ್ದೇಶ ಹೊಂದಿದ್ದು, ಒಂದು ತಿಂಗಳ ಸಮಯ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ತಾಲೂಕಿನ ನಗರ ಸೊಸೈಟಿ ಸಭಾಂಗಣದಲ್ಲಿ ಹೋಬಳಿ ಕಾಂಗ್ರೆಸ್ ಟಕ ಆಯೋಜಿಸಿದ್ದ ಎಸ್ಐಆರ್ ಅರಿವು ಕಾರ್ಯಾಗಾರದಲ್ಲಿ ಮಾತನಾಡಿ, ಎಸ್ಐಆರ್ಗೆ 6 ತಿಂಗಳ ಕಾಲಾವಕಾಶ ನೀಡಬಹುದಿತ್ತು. ಅಲ್ಪ ಸಮಯದ ಆತುರ ಏನಿತ್ತು. ಈ ಚುನಾವಣೆ ಇಲ್ಲವೆಂದರೆ ಮುಂದಿನ ಚುನಾವಣೆಗೆ ಮತ ಪರಿಷ್ಕರಣೆ ಹೊಂದಿಕೆ ಆಗುತ್ತಿತ್ತು. ಅದರಿಂದ ದೊಡ್ಡ ನಷ್ಟ ಏನು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಆದಿವಾಸಿಗಳು, ಗುಡ್ಡಗಾಡು ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಎಸ್ಐಆರ್ಗೆ ದಾಖಲೆ ಒದಗಿಸುವುದು ಸುಲಭವಲ್ಲ. ದಾಖಲೆ ಕೇಳುವುದು ತಪ್ಪಲ್ಲ. ಆದರೆ ಅರ ತಪ್ಪಿದೆ ಎಂದ ಮಾತ್ರಕ್ಕೆ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಅಪರಾಧ. ದೇಶದಲ್ಲಿ ಹುಟ್ಟಿ ಬೆಳೆದ ಜನರಿಗೆ ಕೇಂದ್ರ ಸರ್ಕಾರ ೂರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.