ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ನಾಲ್ಕು ಹುದ್ದೆಗಳ ಪೈಕಿ ಒಬ್ಬರು ಕಾಯಂ ಆಗಿ, ಮತ್ತೊಬ್ಬರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ತಜ್ಞ ವೈದ್ಯರ ಎರಡು ಹುದ್ದೆಗಳ ಪೈಕಿ ಒಬ್ಬರು ಕಾಯಂ ಮತ್ತೊಬ್ಬರು ಗುತ್ತಿಗೆ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 19 ಶುಶ್ರೂಷಕರ ಅವಶ್ಯಕತೆಯಿದ್ದು ಮೂರು ಹುದ್ದೆಗಳು ಭರ್ತಿಯಾಗಬೇಕಿದೆ. ಹಿರಿಯ ಫಾರ್ಮಸಿಸ್ಟ್‌ನ ಒಂದು ಹುದ್ದೆ ಖಾಲಿ ಉಳಿದಿದೆ. ಕಚೇರಿ ಕೆಲಸ ನಿರ್ವಹಿಸುವ ಪ್ರಥಮ ದರ್ಜೆ ಸಹಾಯಕರ ಒಂದು ಹಾಗೂ ದ್ವಿತೀಯ ದರ್ಜೆ ಸಹಾಯಕರ ಎರಡು ಹುದ್ದೆಗಳು ಖಾಲಿ ಉಳಿದಿವೆ.