ಸೊರಬ: ಬೆನಕನ ಅಮಾವಾಸ್ಯೆ ಅಂಗವಾಗಿ ತಾಲೂಕಿನ ಜಡೆ ಸಂಸ್ಥಾನ ಮಠದ ಕರ್ತೃ ಶ್ರೀ ಜಗದ್ಗುರು ಕುಮಾರಕೆಂಪಿನ ಸಿದ್ಧವೃಷಭೇಂದ್ರ ಮಹಾಶಿವಯೋಗಿಗಳ ನಿರ್ವಿಕಲ್ಪ ಗದ್ದುಗೆಗೆ ವಿಶೇಷ ಹಣ್ಣಿನ ಅಲಂಕಾರ, ರುದ್ರಭಿಷೇಕ ಹಾಗೂ ವಿಶೇಷ ಪೂಜೆಯನ್ನು ಶುಕ್ರವಾರ ನೆರೆವೇರಿಸಲಾಯಿತು.
ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ. ಕರ್ತೃ ಗದ್ದುಗೆ ವಿಶೇಷತೆಯಿಂದ ಕೂಡಿದೆ. ಲೋಕ ಕಲ್ಯಾಣಕಾಗಿ ಗುರುಗಳು ಇಂದಿಗೂ ದ್ಯಾನದಲ್ಲಿದ್ದಾರೆ ಎಂಬ ನಂಬಕೆ ಇದೆ. ಕರ್ತೃ ಗದ್ದುಗೆ ಭಕ್ತರು ನಿತ್ಯ ಬಂದು ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆಯುತ್ತಾರೆ. ಅವರ ಕೃಪೆಯಿಂದ ಹಾಗೂ ಭಕ್ತರ ಸಹಕಾರದಿಂದ ಮಠವು ನಾಡಿನ ಎಲ್ಲೆಡೆ ಕೀರ್ತಿಯನ್ನು ಹೆಚ್ಚಿಸಿಕೊಂಡಿದೆ ಎಂದರು.
ಕಿರಿಯ ಶ್ರೀಗಳು ನಮ್ಮ ನಡೆ -ಹಳ್ಳಿಗಳ ಕಡೆ ಎಂಬ ಶೀರ್ಷಿಕೆಯಡಿ ಒಂದು ತಿಂಗಳ ಕಾಲ ಹಳ್ಳಿಗಳಲ್ಲಿ ಶ್ರಾವಣ ಸಂಜೆ ಪ್ರವಚನ ಕಾರ್ಯಕ್ರಮ ಮಾಡಿದ್ದಾರೆ. ಸಮಾಜದಲ್ಲಿ ಅಧ್ಯಾತ್ಮ ಮತ್ತು ಧಾರ್ಮಿಕತೆ ಜಾಗೃತಿ ಹಾಗೂ ಶರಣರ ಚಿಂತನೆಗಳನ್ನು ಜನರಿಗೆ ಉಣಬಡಿಸಿದ್ದಾರೆ ಎಂದು ಹೇಳಿದರು.
ಕಿರಿಯ ಶ್ರೀಗಳಾದ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಅಬಲೂರು ಶ್ರೀ ಗಂಗಾಧರ ದೇವರು, ಮಠದ ಯುವ ವೇದಿಕೆ ಪ್ರಮುಖರು ಇದ್ದರು.