ಕನ್ನಡ ಭಾಷೆಯ ಉಳಿವು ಎಲ್ಲರ ಜವಾಬ್ದಾರಿ

ಭದ್ರಾವತಿ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕು 12ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕೆ.ತೇಜಸ್ವಿನಿ ಉದ್ಘಾಟಿಸಿದರು. ಎಂ.ಎಸ್​.ಅನ್ನಪೂರ್ಣ, ಡಿ.ಮಂಜುನಾಥ್​, ಎಂ.ಎಸ್​. ಸುಧಾಮಣಿ ಮುಂತಾದವರಿದ್ದರು.
ಭದ್ರಾವತಿ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕು 12ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕೆ.ತೇಜಸ್ವಿನಿ ಉದ್ಘಾಟಿಸಿದರು. ಎಂ.ಎಸ್​.ಅನ್ನಪೂರ್ಣ, ಡಿ.ಮಂಜುನಾಥ್​, ಎಂ.ಎಸ್​. ಸುಧಾಮಣಿ ಮುಂತಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಭದ್ರಾವತಿ
ಕನ್ನಡ ಭಾಷೆ ಎಂದರೆ ಕಷ್ಟದಲ್ಲೂ ನಗುವುದನ್ನು ದಡ್ಡನಿಗೂ ಕಲಿಸಿಕೊಟ್ಟ ಭಾಷೆ ಎಂದರ್ಥ. ಅಂತಹ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ದೊಡ್ಡ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದು ತಾಲೂಕು 12ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿದ್ದ ಎಂ.ಎಸ್​.ಅನ್ನಪೂರ್ಣ ತಿಳಿಸಿದರು.
ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆ ಆಯೋಜಿಸಿದ್ದ ತಾಲೂಕು 12 ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆ ಯಾವುದರಲ್ಲೂ ಕಮ್ಮಿ ಇಲ್ಲ. ಮಕ್ಕಳು ಸಾಹಿತ್ಯವನ್ನು ಓದುವುದು ಮಾತ್ರವಲ್ಲ, ಸಾಹಿತ್ಯವನ್ನು ರಚಿಸುವ ಮಟ್ಟಿಗೆ ಸಂವೇಧನಾಶೀಲರಾಗಿದ್ದಾರೆ. ಸಾಹಿತ್ಯವಿಲ್ಲದೆ ಯಾವುದೇ ಸಮಾಜ ಸಹನಶೀಲತೆಯಿಂದ ಕೂಡಿರಲು ಸಾಧ್ಯವಿಲ್ಲ ಎಂದರು.
ಕೆ.ತೇಜಸ್ವಿನಿ, ವಿದ್ಯಾರ್ಥಿನಿ ಮಾತನಾಡಿ, ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಸಮ್ಮೇಳನವಲ್ಲ ಇದೊಂದು ಉತ್ಸವ. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆ ಮತ್ತು ಕನ್ನಡದ ಏಕೀಕರಣಕ್ಕೆ, ಶಿಣಕ್ಕೆ ಉತ್ತೇಜನ ನೀಡುವುದು ಸಮ್ಮೇಳನದ ಉದ್ದೇಶ ಎಂದು ಹೇಳಿದರು. ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆ ಅಧ್ಯೆ ಎಂ.ಎಸ್​.ಸುಧಾಮಣಿ, ಉದ್ಯಮಿ ಬಿ.ಕೆ.ಜಗನ್ನಾಥ್​, ನಗರಸಭೆ ಅಧ್ಯೆ ಗೀತಾ ರಾಜ್​ಕುಮಾರ್​, ಶಾಲಾ ಆಡಳಿತಾಧಿಕಾರಿ ಡಾ.ರಾಕೇಶ್​, ಸಾಹಿತಿ ಚಂದ್ರೇಗೌಡ ಉಪಸ್ಥಿತರಿದ್ದರು. ಸರ್ಕಾರಿ ನೌಕರರ ಸಂದ ಅಧ್ಯಕ್ಷ ಬಿ.ಸಿದ್ದಬಸಪ್ಪ ಮುಂತಾದವರಿದ್ದರು.
20ನೇ ಶತಮಾನ ಅತ್ಯಂತ ವಿಶಿಷ್ಟ
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 20ನೇ ಶತಮಾನ ಅತ್ಯಂತ ವಿಶಿಷ್ಟವಾಗಿದೆ. ಇತ್ತೀಚೆಗೆ ಮಕ್ಕಳು ಪಠ್ಯಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಈ ಪ್ರವೃತ್ತಿಯನ್ನು ಬಿಟ್ಟು ಇತರ ಪುಸ್ತಕಗಳನ್ನು ಓದಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಆಗ ಮಾತ್ರ ಭಾಷೆ ಮತ್ತು ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಸಮ್ಮೇಳನಾಧ್ಯೆ ಕೆ.ತೇಜಸ್ವಿನಿ ನುಡಿದರು.
ಕೇವಲ ಭೌತಿಕ ವಿಕಸನದತ್ತ ನಾವುಗಳೆಲ್ಲರೂ ಸಾಗುತ್ತಿದ್ದೇವೆ. ಪಠ್ಯಕ್ಕೆ ಮಾತ್ರ ಸೀಮಿತರಾಗಿದ್ದು ಸಾಮಾಜಿಕ ಚಿಂತನೆ ಸೃಜನಶೀಲತೆ ಬೆಳೆಸಿಕೊಳ್ಳದಿದ್ದರೆ ಮಕ್ಕಳ ವಿಕಾಸ ಸಾಧ್ಯವಿಲ್ಲ. ಪಠ್ಯ ಓದುವುದರ ಜತೆಗೆ ನಮ್ಮ ನಾಡು, ನುಡಿ, ಸಾಹಿತ್ಯ ಸಂಸತಿಯನ್ನು ಮೈಗೂಡಿಸಿಕೊಳ್ಳಬೇಕು.
ಎ.ಕೆ.ನಾಗೇಂದ್ರಪ್ಪ, ೇತ್ರ ಶಿಕ್ಷಣಾಧಿಕಾರಿ
ಕಲಿಕೆಯ ಗುಣಮಟ್ಟ ಸುಧಾರಿಸಲು ಅನೇಕ ಪ್ರಯೋಗಗಳು ನಡೆಯುತ್ತಿದೆಯಾದರೂ ಕೇವಲ ಫಲಿತಾಂಶದ ಸುಧಾರಣೆಯಾಗುತ್ತಿರುವುದು ಮಾತ್ರ ನಿಜಕ್ಕೂ ಆತಂಕಕಾರಿ ವಿಚಾರವಾಗಿದೆ. ಮಕ್ಕಳು ಇಂದು ಓದುವ ಬರೆಯುವ ಪ್ರಯತ್ನ ಹೆಚ್ಚು ಮಾಡಬೇಕು. ಎಲ್ಲರ ಮನೆಯಲ್ಲಿಯೂ ಸಾಹಿತಿಗಳು, ಕವಿಗಳು ಇದ್ದಾರೆ. ಅಂತವರನ್ನು ಗುರುತಿಸುವ ಕೆಲಸ ಆಗಬೇಕು.
> ಡಿ.ಮಂಜುನಾಥ್​, ಕಸಾಪ ಜಿಲ್ಲಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net