ಭದ್ರಾವತಿಯಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನೂತನ ಅಧ್ಯಕ್ಷ ಡಿ.ಶಂಕರಮೂರ್ತಿ ಉದ್ಘಾಟಿಸಿದರು. ಎಚ್.ಎನ್.ಶಿವಕುಮಾರ್, ಪ್ರಕಾಶ್ ರಾಥೋಡ್ ಇತರರಿದ್ದರು.
Published on:
Copied
Follow Us
ಭದ್ರಾವತಿ: ಅಭಿವೃದ್ಧಿ ಪಥದಲ್ಲಿ ಸಮಾಜವನ್ನು ಮುನ್ನಡೆಸಲು ಸರ್ಕಾರದ ಜತೆಯಲ್ಲಿ ಸೇವಾ ಮನೋಭಾವ ಹೊಂದಿರುವ ಲಯನ್ಸ್ ಕ್ಲಬ್‌ನಂತಹ ಸಂಘ ಸಂಸ್ಥೆಗಳ ಪಾತ್ರವು ಮಹತ್ತರ ಎಂದು ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಹೇಳಿದರು.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಲಯನ್ಸ್ ಕ್ಲಬ್ ನಿಸ್ವಾರ್ಥವಾಗಿ ಸೇವೆ ಮಾಡುವ ಸಂಸ್ಥೆಯಾಗಿದೆ. ಉಚಿತವಾಗಿ ನೇತ್ರಗಳು, ಆರೋಗ್ಯ ತಪಾಸಣೆ, ನೊಂದವರಿಗೆ ನೆರವು ಸೇರಿ ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದೆ. ನೂತನ ಪದಾಧಿಕಾರಿಗಳು ಉತ್ತಮ ಕೆಲಸ ಮಾಡಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಡಿ.ಶಂಕರಮೂರ್ತಿ, ಕಾರ್ಯದರ್ಶಿಯಾಗಿ ವಿನೋದ್ ಗಿರಿ, ಖಜಾಂಚಿಯಾಗಿ ಮಂಜುನಾಥ್ ಅಧಿಕಾರ ಸ್ವೀಕರಿಸಿದರು. ಲಯನ್ಸ್ ಗವರ್ನರ್ ಎಚ್.ಎನ್.ಶಿವಕುಮಾರ್, ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ್ ಎಂ.ಶೇಠ್, ದಿವಾಕರ್ ಶೆಟ್ಟಿ, ಬಿರಾದಾರ್, ಶೇಖರಪ್ಪ ಇತರರಿದ್ದರು.