ಮುಸಲ್ಮಾನರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದೇ ಅನಿಷ್ಠಗಳಿಗೆ ಕಾರಣ । Shivaji procession
ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಪ್ರಮುಖರಾದ ಕೆ.ಈ.ಕಾಂತೇಶ್, ಈ.ವಿಶ್ವಾಸ್, ಮೋಹನ್ ಜಾದವ್, ಕುಬೇರಪ್ಪ, ಮಹಾಲಿಂಗಶಾಸ್ತ್ರೀ, ರಾಜು, ಎಂ.ಜಿ.ಬಾಲು, ಗಿರೀಶ್, ಅರುಣ್ ಸುದ್ದಿಗೋಷ್ಠಿಯಲ್ಲಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾಲಿಬಾನ್, ತುಘಲಕ್ ಸರ್ಕಾರದಂತೆ ವರ್ತಿಸುತ್ತಿದೆ
ಕಲ್ಲು ತೂರಾಟವಾದ ಮಸೀದಿ ಮುಟ್ಟುಗೋಲು ಹಾಕಿ, ಮೌಲ್ವಿಗಳ ಬಂಧನಕ್ಕೆ ಒತ್ತಾಯ
ಶಿವಮೊಗ್ಗದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾಲಿಬಾನ್(Taliban), ತುಘಲಕ್(Tughlaq) ಸರ್ಕಾರದಂತೆ ವರ್ತಿಸುತ್ತಿದ್ದು, ದೇಶದ್ರೋಹಿ, ಗೂಂಡಾ ಮುಸಲ್ಮಾನರಿಗೆ ಆಶೀರ್ವಾದ, ಬೆಂಬಲ ನೀಡುತ್ತಿರುವುದೇ ಎಲ್ಲ ಅನಿಷ್ಠ ಬೆಳವಣಿಗೆಗೆ ಕಾರಣವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ದೂರಿದರು.
ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ(Shivaji procession) ಮೇಲೆ ಮಸೀದಿ ಮೇಲಿಂದ ಚಪ್ಪಲಿ, ಕಲ್ಲು ತೂರಾಟ ಆಗಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಸುಮಾರು 200 ಮುಸ್ಲಿಂ ಗೂಂಡಾಗಳು ಮಸೀದಿ(Mosque) ಮೇಲಿಂದ ಕಲ್ಲು ತೂರಾಟ ಮಾಡಿದ್ದರ ಪರಿಣಾಮ ಎಸ್‌ಪಿ(SP) ಸೇರಿ ಅನೇಕ ಪೊಲೀಸರು ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡವರು ಗಾಯಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಮುಸ್ಲಿಮರ ದುಂಡಾವರ್ತನೆ ಹೆಚ್ಚಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಈಗಾಗಲೇ ನೆಲಮಂಗಳ, ಚಿಕ್ಕಮಗಳೂರು, ಮದ್ದೂರು, ಚಿತ್ತಾಪುರ, ದಾವಣಗೆರೆ, ಹುಬ್ಬಳ್ಳಿ ಮತ್ತಿತರರ ಕಡೆಗಳಲ್ಲಿ ಇಂತಹ ದುಷ್ಕೃತ್ಯಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಕಾಂಗ್ರೆಸ್(Congress) ಗೂಂಡಾ ಮುಸಲ್ಮಾನರಿಗೆ ರಕ್ಷಣೆ ನೀಡುತ್ತಿದೆ. ಕಾಂಗ್ರೆಸ್ ಮುಖಂಡರು ಔರಂಗಜೇಬ(Aurangzeb)ನ ಮನಸ್ಥಿತಿಯಲ್ಲಿದ್ದು, ತಕ್ಷಣವೇ ಅದನ್ನು ಬದಲಾಯಿಸಿಕೊಳ್ಳಬೇಕು. ಯಾವ ಮಸೀದಿಗಳಿಂದ ಕಲ್ಲು ತೂರಾಟವಾಗಿದೆಯೋ ಆ ಮಸೀದಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಲ್ಲಿನ ಮೌಲ್ವಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಾಗಲಕೋಟೆ(Bhagalakote)ಯಲ್ಲಿ ದೊಡ್ಡಮಟ್ಟದಲ್ಲಿ ಕಲ್ಲು ತೂರಾಟ ಆಗಿದೆ. ಎಸ್‌ಪಿ ತಮ್ಮ ತಲೆಗೆ ಕಲ್ಲುಬಿದ್ದು ಗಾಯವಾಗಿ ರಕ್ತಸ್ರಾವ(Bleeding) ಆಗುತ್ತಿದ್ದರೂ ಮಾಧ್ಯಮದ ಎದುರು ಕೆಲವು ಸಣ್ಣ ಕಲ್ಲುಗಳ ತೂರಾಟವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಯಾರಿಗೂ ಪೆಟ್ಟಾಗಲಿಲ್ಲ ಎಂದಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯಕ್ಕೆ ಸಾಕ್ಷಿಯಾಗಿದ್ದು, ಎಸ್ಪಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.