ಮಹಿಳೆಯರನ್ನು ಕಾಣುವ ಬಗೆಯಲ್ಲಿದೆ ದೇಶದ ಪ್ರಗತಿ I women nation

ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದಿಂದ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಶ್ರೀರಂಜಿನಿ ದತ್ತಾತ್ರಿ, ಹೇಮಾ ಸತೀಶ್, ಸುನೀತಾ ಅರುಣ್, ವೀಣಾ ಹರ್ಷ, ಸುಮಿತ್ರಾ ಕೇಶವಮೂರ್ತಿ, ಪ್ರಮೀಳಾ ಗಣೇಶ್, ಲಾವಣ್ಯ ಸಂದೇಶ್, ವೇದಾ ನಾಗರಾಜ್ ಇದ್ದರು.
ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದಿಂದ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಶ್ರೀರಂಜಿನಿ ದತ್ತಾತ್ರಿ, ಹೇಮಾ ಸತೀಶ್, ಸುನೀತಾ ಅರುಣ್, ವೀಣಾ ಹರ್ಷ, ಸುಮಿತ್ರಾ ಕೇಶವಮೂರ್ತಿ, ಪ್ರಮೀಳಾ ಗಣೇಶ್, ಲಾವಣ್ಯ ಸಂದೇಶ್, ವೇದಾ ನಾಗರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀರಂಜಿನಿ ದತ್ತಾತ್ರಿ ಅಭಿಮತ
  • ಮಿತ್ರೆ ಕಾಸ್ಮೋ ಕ್ಲಬ್‌ನಲ್ಲಿ ಮಹಿಳಾ ದಿನಾಚರಣೆ
ಶಿವಮೊಗ್ಗ: ಮಹಿಳೆ (womem) ದೇಶದ ಪ್ರಗತಿಯ ಸಂಕೇತ. ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತದೆ ಎಂಬುದರ ಆಧಾರದಲ್ಲಿ ಯಾವುದೇ ದೇಶದ ಪ್ರಗತಿ ಅಡಗಿರುತ್ತದೆ. ಸದೃಢ ಮಹಿಳೆಯಿಂದ ಸದೃಢ ಕುಟುಂಬ (family), ಸಮಾಜ ದೇಶದ ಅಭಿವೃದ್ಧಿ ಎಂಬುದು ಅಕ್ಷರಶಃ ನಿಜ. ಅಕ್ಷರ ಕಲಿತ ಮಹಿಳೆ ತನ್ನ ಕುಟುಂಬದ ಸಬಲೀಕರಣಕ್ಕೆ ಸಹಜವಾಗಿಯೇ ಶ್ರಮಿಸುತ್ತಾಳೆ ಎಂದು ಮಿತ್ರೆ ಕಾಸ್ಮೋ ಕ್ಲಬ್ (club)ಮಹಿಳಾ ಬಳಗದ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು.
ಕಾಸ್ಮೋ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿದ ಮಾತನಾಡಿದ ಅವರು, ಮಹಿಳೆ ಮೌಲ್ಯ ಮತ್ತು ನೈತಿಕತೆಯನು ಸಮಾಜದ ಮೂಲ ಮಂತ್ರವಾಗಿಸುತ್ತಾಳೆ. ಇಂದು ಬಹುತೇಕ ಮಹಿಳೆಯರು ಸಮಾನ ಹಕ್ಕು, ಅವಕಾಶ, ಅಧಿಕಾರ ಎಂದು ಮುನ್ನಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮಹಿಳೆಯರು ಶಿಕ್ಷಣ ಪಡೆಯುವಲ್ಲಿ ಶೇ.60ರಷ್ಟು ಪ್ರಗತಿ ಸಾಧಿಸಿದ್ದಾರೆ. ಮಹಿಳಾ ಐಎಎಸ್ ಅಧಿಕಾರಿಗಳ ಪ್ರಮಾಣ ಶೇ.14, ನ್ಯಾಯಾಧೀಶರು ಶೇ.7, ಬ್ಯಾಂಕ್ ಉದ್ಯೋಗಿಗಳು ಶೇ.18, ತಾಂತ್ರಿಕ ಕೌಶಲ ಶೇ. 25, ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಶೇ.35 ಇದೆ. ಈ ವಲಯಗಳಲ್ಲಿ ಮಹಿಳೆಯರು ಮತ್ತಷ್ಟು ಪ್ರಗತಿ ಕಾಣಬೇಕು ಎಂದರು.
ಮಿತ್ರೆ ಬಳಗದ ಗಾರ್ಗಿ ತಂಡದ ನಾಯಕಿ ರಾಜಶ್ರೀ ಬಸವರಾಜ್ ಮಾತನಾಡಿ, ಮಾತೃದೇವೋಭವ ಎನ್ನುವ ನಮ್ಮ ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ. ಕುಟುಂಬ, ಸಮಾಜವನ್ನು ಸಮತೋಲನ ಮಾಡುವ ಶಕ್ತಿಯಿರುವ ಮಹಿಳೆಯೇ ಕುಟುಂಬದ ಪ್ರಗತಿಯ ಸಂಕೇತವಾಗಿದ್ದಾಳೆ ಎಂದು ಹೇಳಿದರು.
ಪ್ರಮುಖರಾದ ವೀಣಾ ಹರ್ಷ, ಸುನೀತಾ ಅರುಣ್, ದೀಪಾ ಶ್ರೀನಿವಾಸ್, ಹೇಮಾ ಸತೀಶ್, ಸುಮಿತ್ರಾ ಕೇಶವಮೂರ್ತಿ, ಲತಾ ಗೋವಿಂದ್, ಮಧುರಾ ಧನಂಜಯ್, ಲಾವಣ್ಯ ಸಂದೇಶ್, ಪ್ರಮಿಳಾ ಗಣೇಶ್, ಲಾವಣ್ಯ ಶಶಿಧರ್, ವೇದಾ ನಾಗರಾಜ್, ರೇಖಾ ಪ್ರಕಾಶ್, ಗೀತಾ ಜಗದೀಶ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net