ಹಗರಣದ ನೈತಿಕ ಹೊಣೆ ಹೊತ್ತು ಪ್ರಧಾನಿ, ಗೃಹಸಚಿವ ರಾಜೀನಾಮೆ ನೀಡಲಿ

ಅಯೋಧ್ಯೆ ರಾಮಮಂದಿರದಲ್ಲಿ ಅಕ್ರಮಗಳನ್ನು ಮಾಡಿರುವವರಿಗೆ ಶಿಗಾಗಿ ಪ್ರಾರ್ಥಿಸಿ ತೀರ್ಥಹಳ್ಳಿ ಪಟ್ಟಣದ ಕೋದಂಡರಾಮ ದೇವಸ್ಥಾನದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಪೂಜೆ ಸಲ್ಲಿಸಿದರು. ಜಿ.ಎಸ್​.ನಾರಾಯಣ ರಾವ್​, ಕೆಸ್ತೂರು ಮಂಜುನಾಥ್​, ಬಿ.ಕೆ.ವಾದಿರಾಜ್​ ಇದ್ದರು.
ಅಯೋಧ್ಯೆ ರಾಮಮಂದಿರದಲ್ಲಿ ಅಕ್ರಮಗಳನ್ನು ಮಾಡಿರುವವರಿಗೆ ಶಿಗಾಗಿ ಪ್ರಾರ್ಥಿಸಿ ತೀರ್ಥಹಳ್ಳಿ ಪಟ್ಟಣದ ಕೋದಂಡರಾಮ ದೇವಸ್ಥಾನದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಪೂಜೆ ಸಲ್ಲಿಸಿದರು. ಜಿ.ಎಸ್​.ನಾರಾಯಣ ರಾವ್​, ಕೆಸ್ತೂರು ಮಂಜುನಾಥ್​, ಬಿ.ಕೆ.ವಾದಿರಾಜ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಪ್ರಾರ್ಥಿಸಿ ಕೋದಂಡರಾಮ ದೇವಸ್ಥಾನದಲ್ಲಿ ಪೂಜೆ
  • ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಒತ್ತಾಯ
  • ರಾಮನ ಹೆಸರಲ್ಲಿ ಗೆದ್ದು ಅನ್ಯಾಯ
  • ಹಗರಣದ ನೈತಿಕ ಹೊಣೆ ಹೊತ್ತು ಪ್ರಧಾನಿ, ಗೃಹಸಚಿವ ರಾಜೀನಾಮೆ ನೀಡಲಿ
ವಿಜಯವಾಣಿ ಸುದ್ದಿಜಾಲ ತೀರ್ಥಹಳ್ಳಿ
ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಿರುವ ಕೋಟ್ಯಂತರ ರೂ. ಹಣದ ಅಕ್ರಮಗಳಿಗೆ ಪರೋವಾಗಿ ಪ್ರಧಾನ ಮಂತ್ರಿ, ಗೃಹ ಸಚಿವ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಹೊಣೆಗಾರರು. ಇವರು ನೈತಿಕತೆ ಆಧಾರದಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಆಗ್ರಹಿಸಿದರು.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿ ಶುಕ್ರವಾರ ಪಟ್ಟಣದ ಕೋದಂಡರಾಮ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ಟ್ರಸ್ಟ್​ ರಚನೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಆಗಿರುವ ಕಾರಣ ಈ ಮೂವರೇ ಹೊಣೆಗಾರರು ಎಂದು ಆರೋಪಿಸಿದರು.
ರಾಮನ ಹೆಸರಿನಲ್ಲಿ ನಡೆದಿರುವ ಲೂಟಿ ಇಟ್ಟಿಗೆ ಸಂಗ್ರಹದಿಂದ ಮೊದಲ್ಗೊಂಡು ಲಾಗಾಯ್ತಿನಿಂದ ನಡೆದಿದೆ. ಇದರಿಂದ ದೇಶದ ಆಸ್ತಿಕ ಜನರ ಭಾವನೆಗೆ ಧಕ್ಕೆಯಾಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಚಕಾರ ಎತ್ತದಿರುವುದು ಖಂಡನೀಯ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಶಿೆ ಆಗಬೇಕು. ರಾಮನ ಹೆಸರಲ್ಲಿ ಗೆದ್ದು ಅನ್ಯಾಯ ಮಾರ್ಗದಲ್ಲಿ ಗಳಿಸಿದ ಸಂಪತ್ತನ್ನು ರಾಮನಿಗೇ ಅರ್ಪಿಸಬೇಕು ಎಂದು ಒತ್ತಾಯಿಸಿದರು.
ಅಯೋಧ್ಯೆಯಲ್ಲಿ ನರೇಂದ್ರ ಮೋದಿ ಅವರಿಂದ ನಡೆದಿರುವ ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿಂದೂ ಧರ್ಮದ ಪ್ರಕಾರ ಶಾಸ್ತ್ರೊಕ್ತವಾಗಿ ನಡೆದಿಲ್ಲ. ಹೋಮ, ಹವನಗಳಿಗೆ ದಂಪತಿಗಳು ಕೂರಬೇಕು. ಮೋದಿ ಅವರು ವಿವಾಹಿತರಾಗಿದ್ದರೂ ಒಂಟಿಯಾಗಿ ಪ್ರಾಣಪ್ರತಿಷ್ಠೆಯ ವಿಧಿ ವಿಧಾನಗಳಲ್ಲಿ ಭಾಗಿಯಾಗಿದ್ದರು ಎಂದು ಟೀಕಿಸಿದರು.
ಕಾಂಗ್ರೆಸ್​ ಮುಖಂಡರಾದ ಜಿ.ಎಸ್​.ನಾರಾಯಣ ರಾವ್​, ಕೆಸ್ತೂರು ಮಂಜುನಾಥ್​, ಬಿ.ಕೆ.ವಾದಿರಾಜ್​, ವಿನಾಯಕ ಹೊದಲ, ಪುಟ್ಟೋಡ್ಲು ರಾವೇಂದ್ರ, ಬಿ.ಆರ್​.ರಾವೇಂದ್ರ ಶೆಟ್ಟಿ, ಕೇಳೂರು ಮಿತ್ರಾ, ಅಮರನಾಥ ಶೆಟ್ಟಿ, ಆದರ್ಶ ಹುಂಚದಕಟ್ಟೆ, ದಿನೇಶ್​ ಹುಲ್ಲತ್ತಿ, ಕುಡುಮಲ್ಲಿಗೆ ರಮೇಶ್​ ಶೆಟ್ಟಿ ಇತರರಿದ್ದರು.
ರಾಮ ಮಂದಿರ ದೇಶದ ಆಸ್ತಿ. ಪ್ರತಿಯೊಬ್ಬ ಪ್ರಜೆಗೂ ಪ್ರಶ್ನಿಸುವ ಹಕ್ಕಿದೆ. ಈ ವಿಚಾರ ಆರ್​ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪ್ರಧಾನಿ ಅವರ ಹೇಳಿಕೆಯೇ ಅನುಮಾನಕ್ಕೆ ಕಾರಣವಾಗಿದೆ. ಟ್ರಸ್ಟ್​ನ ಪ್ರಮುಖರನ್ನೇ ಈವರೆಗೆ ಪ್ರಶ್ನೆ ಮಾಡದಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಹಗರಣದ ಹಿಂದಿನ ಮಾಸ್ಟರ್​ ಮೈಂಡ್​ ಆರ್​ಎಸ್​ಎಸ್​ ಆಗಿರಬೇಕು. ಇಲ್ಲವಾದಲ್ಲಿ ಈ ಬಗ್ಗೆ ಆ ಸಂಟನೆಯ ಪ್ರಮುಖರು ಧ್ವನಿ ಎತ್ತಬೇಕಿತ್ತು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು.
> ಕಿಮ್ಮನೆ ರತ್ನಾಕರ್​, ಮಾಜಿ ಸಚಿವ
ಸ್ಪರ್ಧಿಸಲ್ಲವೆಂದು ಆಶ್ವಾಸನೆ ನೀಡಿಲ್ಲ
ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಾನು ಯಾರಿಗೂ ಆಶ್ವಾಸನೆ ನೀಡಿಲ್ಲ. ಪದ ತೀರ್ಮಾನದ ನಂತರ ಯೋಚಿಸುತ್ತೇನೆ ಎಂದು ಕಿಮ್ಮನೆ ರತ್ನಾಕರ್​ ಹೇಳಿದರು. ನಾನೂ ಕೂಡ ದೇವರ ಮೇಲೆ ಭಕ್ತಿ ಹೊಂದಿರುವವನು. ದೇವಸ್ಥಾನಗಳಿಗೆ ಮತ್ತು ಧಾರ್ಮಿಕ ಕಾರ್ಯಗಳಿಗೆ ನಾನು ಮಾಡಿದಷ್ಟು ಸಹಾಯವನ್ನು ಕ್ಷೇತ್ರದ ಬೇರ್ಯಾರೂ ಮಾಡಿಲ್ಲ. ಕೋದಂಡರಾಮ ದೇವಸ್ಥಾನಕ್ಕೆ ಸರ್ಕಾರದಿಂದ 25 ಲ ರೂ. ಅನುದಾನ ಮಂಜೂರು ಮಾಡಿಸಿದ್ದೆ. ಇನ್ನಷ್ಟು ಅನುದಾನ ತಂದು ಅಭಿವೃದ್ಧಿಪಡಿಸುವ ಆಶಯ ಹೊಂದಿದ್ದೇನೆ. ರಾಮೇಶ್ವರ ದೇವಸ್ಥಾನದ ಜೀಣೋರ್ದ್ಧಾರವೂ ನನ್ನ ಅವಧಿಯಲ್ಲೇ ನಡೆದಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net