ಎಸ್​ಐಆರ್​ ಹಕ್ಕು ಕಸಿಯುವ ಹುನ್ನಾರ

 ಕಲಗೋಡು ರತ್ನಾಕರ್​
ಕಲಗೋಡು ರತ್ನಾಕರ್​
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್​ ಆರೋಪ
  • ಎಸ್​ಐಆರ್​ ಹಕ್ಕು ಕಸಿಯುವ ಹುನ್ನಾರ
ಹೊಸನಗರ: ಎಸ್​ಐಆರ್​ ಜಾರಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಇದು ಮತದಾರರ ಹಕ್ಕನ್ನು ಕಸಿಯುವ ಹುನ್ನಾರ ಎಂದು ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್​ ಆರೋಪಿಸಿದರು.
ಚುನಾವಣಾ ಆಯೋಗವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಮತದಾರರ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿದೆ. ಇದರಿಂದ ಮತದಾರರು ಸರ್ಕಾರದ ಎಲ್ಲ ಸವಲತ್ತುಗಳಿಂದ ವಂಚಿತನಾಗುತ್ತಾರೆ. ಹಿಂದೆಯೂ ಸಹ ಮತಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿತ್ತು. ಆದರೆ ಆಗ ಯಾವೊಬ್ಬ ಮತದಾರನೂ ಮತದಾನದ ಹಕ್ಕನ್ನು ಕಳೆದುಕೊಂಡಿರಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರ ಎಸ್​ಐಆರ್​ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಣ ಶಾಸನ ರೂಪಿಸಲು ಎಂದು ಪಟ್ಟಣದ ಗಾಂಧಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ 91ಲ ಮತದಾರರನ್ನು ಅನರ್ಹಗೊಳಿಸುವ ಮೂಲಕ ಬಿಜೆಪಿ ತನ್ನ ರಾಜಕೀಯ ದಾರಿಯನ್ನ ಸುಲಭ ಮಾಡಿಕೊಂಡಿದೆ. ರಾಜ್ಯದಲ್ಲೂ ಇದೇ ಪ್ರಯತ್ನ ನಡೆಯುತ್ತಿದೆ. ರಾಜ್ಯ ಸರ್ಕಾರ ಎಂದಿಗೂ ಅವಕಾಶ ನೀಡುವುದಿಲ್ಲ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಕೆಪಿಸಿಸಿ ಅಧ್ಯ ಬಿ.ಕೆ.ಹರಿಪ್ರಸಾದ್​, ಮಾಜಿ ಸಿಎಂ ಸಿದ್ದರಾಮಯ್ಯ ಮತದಾನದಿಂದ ಯಾರೊಬ್ಬರೂ ವಂಚಿತರಾಗಬಾರದು ಎಂಬ ಕಾರಣದಿಂದ ವಿಶೇಷ ಸಮಿತಿ ರಚಿಸಿದ್ದು ಪ್ರತಿ ಬೂತ್​ ಮಟ್ಟದಲ್ಲಿ ಒಬ್ಬ ಉಸ್ತುವಾರಿ ನೇಮಕ ಮಾಡಲಾಗಿದೆ ಎಂದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯ ಬಿ.ಜಿ.ಚಂದ್ರಮೌಳಿ, ಮುಖಂಡರಾದ ಪ್ರಭಾಕರ್​, ಸದಾಶಿವ ಶೆಟ್ಟಿ, ಅಶ್ವಿನಿ ಕುಮಾರ್​, ಗುರುರಾಜ್​, ಕೃಷ್ಣಮೂರ್ತಿ, ಚಂದ್ರಮೂರ್ತಿ, ಚನ್ನಬಸಪ್ಪ, ಅಣ್ಣಪ್ಪ, ಉಬೇದ್​, ಗುರು ಜಯನಗರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net