ದೀವರ ಸಮುದಾಯದ ಅಸ್ಮಿತೆ ಉಳಿವಿಗೆ ಪರಿಪಕ್ವ ಕಾಲ

ಸೊರಬದಲ್ಲಿ ಏರ್ಪಡಿಸಿದ್ದ ದೀವರ ದಿಕ್ಕು ದೆಸೆ ಸಮಾಲೋಚನಾ ಸಭೆಯಲ್ಲಿ ತಬಲಿ ಬಂಗಾರಪ್ಪ ಮಾತನಾಡಿದರು. ಈಶ್ವರಪ್ಪ, ಬಸವಂತಪ್ಪ, ಶಿವಾನಂದ ಕುಗ್ವೆ, ರಾಜಪ್ಪ ಮಾಸ್ತರ್​, ರೇಣುಕಮ್ಮ ಇತರರಿದ್ದರು.
ಸೊರಬದಲ್ಲಿ ಏರ್ಪಡಿಸಿದ್ದ ದೀವರ ದಿಕ್ಕು ದೆಸೆ ಸಮಾಲೋಚನಾ ಸಭೆಯಲ್ಲಿ ತಬಲಿ ಬಂಗಾರಪ್ಪ ಮಾತನಾಡಿದರು. ಈಶ್ವರಪ್ಪ, ಬಸವಂತಪ್ಪ, ಶಿವಾನಂದ ಕುಗ್ವೆ, ರಾಜಪ್ಪ ಮಾಸ್ತರ್​, ರೇಣುಕಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೊರಬ ರಾಜ್​ ಕಲಾೇತ್ರದ ರಂಗಮಂದಿರದಲ್ಲಿ ಸಮಾಲೋಚನಾ ಸಭೆ
  • ಮುಖಂಡ ತಬಲಿ ಬಂಗಾರಪ್ಪ ಹೇಳಿಕೆ
  • ದಿವರ ಸಮಾಜದ ಎಲ್ಲರೂ ಒಗ್ಗೂಡಿ
ಸೊರಬ: ದೀವರ ಸಂಸತಿ ಹಾಗೂ ಅಸ್ಮಿತೆ ಉಳಿಸುವ ಪರಿಪಕ್ವ ಕಾಲ ಇದಾಗಿದ್ದು, ಸಮಾಜದ ಎಲ್ಲರೂ ಒಟ್ಟುಗೂಡಿ ಏಳಿಗೆಗೆ ಕೈಜೋಡಿಸಬೇಕು ಎಂದು ದೀವರ ಸಮಾಜದ ಮುಖಂಡ ತಬಲಿ ಬಂಗಾರಪ್ಪ ಹೇಳಿದರು.
ಪಟ್ಟಣದ ರಾಜ್​ ಕಲಾೇತ್ರದ ರಂಗಮಂದಿರದಲ್ಲಿ ಭಾನುವಾರ ಶ್ರೀಕಲ್ಲೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ಕರ್ನಾಟಕ ದೀವರು ಸಾಂಸತಿಕ ಅಧ್ಯಯನ ಸಂಸ್ಥೆ ಹಾಗೂ ವಿವಿಧ ಸಂ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ದೀವರ ದಿಕ್ಕು&ದೆಸೆ ಸಮಾಲೋಚನಾ ಸಭೆ  ಉದ್ಘಾಟಿಸಿ ಮಾತನಾಡಿದರು.
ನಮ್ಮತನ ಬಿಡಲು ಯಾರೂ ತಯಾರಿಲ್ಲ. ಆದರೆ ಕಾನೂನಿನ ತೊಡಕಿದೆ. ನಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಸರ್ಕಾರಿ ಉದ್ಯೋಗಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈಡಿಗ ಎಂದು ಜಾತಿಯಲ್ಲಿ ನಮೂದಿಸುತ್ತಿದ್ದಾರೆ. ಆದರೆ ಸರ್ಕಾರವೇ ಗೆಜೆಟೆಡ್​ ನೋಟಿಫೀಕೇಷನಲ್ಲಿ ದೀವರ ಹೆಸರನು ನಮೊದಿಸಿದೆ. ಹೀಗಿರುವಾಗ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಹಿಂದೆ ದೀವರ ನಾಮ ಬಲದ ಮೇಲೆ ಹೋರಾಟ ಮಾಡಿ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ದೀವರ ಸಂಸತಿಗೆ ಬಹಳಷ್ಟು ಇತಿಹಾಸ ವಿದೆ. ಆ ಸಂಸತಿಯನ್ನು ಉಳಿಸಿ ಬೆಳೆಸಲು ಈಗ ಸರಿಯಾದ ಸಮಯವಾಗಿದೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದರು.
ಸಮಾಜದ ಮುಖಂಡ ವೈ.ಜಿ.ಪುಟ್ಟಸ್ವಾಮಿ ಮಾತನಾಡಿ, ದೀವರು ಎಂದು ಹೇಳಿಕೊಳ್ಳಲು ಯಾರೂ ಹಿಂಜರಿಕೆ ಪಡುವ ಅಗತ್ಯವಿಲ್ಲ.  ಯಾವ ರೀತಿಯಲ್ಲಿಯೂ ಅಪಮಾನಕ್ಕೆ ಒಳಗಾಗುವ ಅಗತ್ಯವೂ ಇಲ್ಲ ಎಂದು ತಿಳಿಸಿದರು.
ಸಮಾಜದ ಪ್ರಮುಖರಾದ ಈಶ್ವರಪ್ಪ, ಬಸವಂತಪ್ಪ, ಶಿವಾನಂದ ಕುಗ್ವೆ, ರಾಜಪ್ಪ ಮಾಸ್ತರ್​, ರೇಣುಕಮ್ಮ, ಗಣಪತ್ಯಪ್ಪ, ರಾಮಪ್ಪ, ಹರ್ಷ, ನಾಗೇಶ್​, ನಿಂಗಪ್ಪ, ಸಿ.ಕೆ.ಬಲಿಂದ್ರಪ್ಪ ಇತರರಿದ್ದರು.
ದೀವರು ಮೂಲತ@ ಪ್ರಕೃತಿ ಆರಾಧಕರು. ಮಲೆನಾಡಿನ ಸಂಸತಿಯಲ್ಲಿ ದೀವರ ಸಂಸತಿ ಇಂದಿಗೂ ಆಚರಣೆಯಲ್ಲಿವೆ. ಅತಿ ಹೆಚ್ಚು ಕೆರೆ ಬೇಟೆ, ಕಾಡು ಬೇಟೆ, ತಿಂಗಳಿಗೊಮ್ಮೆ ಬರುವ ಪಂಚಮಿ, ಗೌರಿ ಹಬ್ಬದಲ್ಲಿ ಸಹೋದರತ್ವ, ದಸರಾ, ಭೂಮಿ ಹುಣ್ಣಿಮೆ, ದೀಪಾವಳಿ, ಹೀಗೆ ಸಾಲು ಸಾಲು ಹಬ್ಬಗಳ ಸಂಸತಿ ದೀವರಲ್ಲಿದೆ.
> ವೈ.ಜಿ. ಪುಟ್ಟಸ್ವಾಮಿ, ದೀವರ ಸಮಾಜದ ಮುಖಂಡ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net