ನೊಳಂಬ ಸಮಾಜವು ಸೂತ್ರವಿಲ್ಲದ ಗಾಳಿಪಟ । Siddaramaiah Jayanti

ಶ್ರೀ ಗುರು ಸಿದ್ದರಾಮೇಶ್ವರರ 853ನೇ ಜಯಂತಿ ಮಹೋತ್ಸವದಲ್ಲಿ ನಂದಿ ವಧು-ವರರ ಅನ್ವೇಷಣಾ ಕೇಂದ್ರವನ್ನು ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಡಾ. ಡಿ.ಬಿ.ಗಂಗಪ್ಪ, ಡಿ.ಬಿ.ಶಂಕರಪ್ಪ, ಹಾ.ಮಾ.ನಾಗಾರ್ಜುನ್, ಬಸವರಾಜ್ ನಲ್ಲಿಸರ, ನಿವೃತ್ತ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಡಾ. ಧನಂಜಯ, ಜಿ.ಕೆ.ಪರಮೇಶ್ವರಪ್ಪ, ಪಿ.ರುದ್ರೇಶ್, ಉಮಾ ಪಾಟೀಲ್, ಜಯರಾಜ ಗಾಮದ ಇದ್ದರು.
ಶ್ರೀ ಗುರು ಸಿದ್ದರಾಮೇಶ್ವರರ 853ನೇ ಜಯಂತಿ ಮಹೋತ್ಸವದಲ್ಲಿ ನಂದಿ ವಧು-ವರರ ಅನ್ವೇಷಣಾ ಕೇಂದ್ರವನ್ನು ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಡಾ. ಡಿ.ಬಿ.ಗಂಗಪ್ಪ, ಡಿ.ಬಿ.ಶಂಕರಪ್ಪ, ಹಾ.ಮಾ.ನಾಗಾರ್ಜುನ್, ಬಸವರಾಜ್ ನಲ್ಲಿಸರ, ನಿವೃತ್ತ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಡಾ. ಧನಂಜಯ, ಜಿ.ಕೆ.ಪರಮೇಶ್ವರಪ್ಪ, ಪಿ.ರುದ್ರೇಶ್, ಉಮಾ ಪಾಟೀಲ್, ಜಯರಾಜ ಗಾಮದ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಶ್ರೀಗುರು ಸಿದ್ದರಾಮೇಶ್ವರರ 853ನೇ ಜಯಂತ್ಯೋತ್ಸವ
  • 8ರಿಂದ 9 ಶಾಸಕರಿದ್ದರು. ಇಂದು ಒಬ್ಬ ಶಾಸಕರಿದ್ದಾರೆ. ಇದಕ್ಕೆ ಬೇರೆ ಯಾರೂ ಹೊಣೆಗಾರರಲ್ಲ
  • ನಂದಿಗುಡಿಯ ವೃಷಭಪುರಿ ಸಂಸ್ಥಾನ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿಕೆ
ಶಿವಮೊಗ್ಗ: ನೊಳಂಬ ಸಮಾಜವು ಸೂತ್ರವಿಲ್ಲದ ಗಾಳಿಪಟ, ಗುರುವಿಲ್ಲದ ವಿದ್ಯೆ, ಗುರಿಯಿಲ್ಲದ ಪ್ರಯಾಣ, ಕಡಿವಾಣವಿಲ್ಲದ ಕುದುರೆ ಹಾಗೂ ನಾಯಕನಿಲ್ಲದ ಸೇನೆಯಂತಾಗಿದ್ದು, ಅದನ್ನೆಲ್ಲ ಮೀರಿ ಸಮಾಜದಲ್ಲಿ ನಮ್ಮ ಅಸ್ತಿತ್ವವನ್ನು ಗಟ್ಟಿಯಾಗಿ ತೋರಿಸಿಕೊಳ್ಳಬೇಕಾಗಿದೆ ಎಂದು ನಂದಿಗುಡಿ(Nandigudi)ಯ ವೃಷಭಪುರಿ ಸಂಸ್ಥಾನ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಗುರುಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರೀಗುರು ಸಿದ್ದರಾಮೇಶ್ವರ(Siddaramaiah)ರ 853ನೇ ಜಯಂತ್ಯೋತ್ಸವದ ಸಾನಿಧ್ಯ ವಹಿಸಿ ಆಶೀರ್ವದಿಸಿದ ಅವರು, ಒಂದು ಕಾಲದಲ್ಲಿ ಕರ್ನಾಟಕದಲ್ಲಿ 8ರಿಂದ 9 ಶಾಸಕರು ನೊಳಂಬ(Nolamba)ಸಮುದಾಯವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಇಂದು ಕೇವಲ ಒಬ್ಬ ಶಾಸಕರಷ್ಟೇ ಇದ್ದಾರೆ. ಇದಕ್ಕೆ ಬೇರೆ ಯಾರೂ ಹೊಣೆಗಾರರಲ್ಲ. ನಮ್ಮ ಸಮುದಾಯದವರೇ ಹೊಣೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.
ಜಯಂತಿ(Jayanti) ಮಹೋತ್ಸವಗಳು ಕೇವಲ ಆಚರಣೆಗೆ ಸೀಮಿತವಾಗದೇ, ಸಮುದಾಯದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸುವ ಶರಣ ಜಯಂತಿಗಳಾಗಬೇಕು. ಸಮಾಜದ ಕೊನೆಯ ವ್ಯಕ್ತಿಗೂ ಸಿದ್ದರಾಮೇಶ್ವರರ ಸಾಮಾಜಿಕ ಸೇವೆಗಳ ಅರಿವು ಮೂಡಿಸಿ, ಒಗ್ಗಟ್ಟಿನೊಂದಿಗೆ ನೊಳಂಬ ಸಮುದಾಯವು ರಾಜಕೀಯ(Politics) ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲಿ ಗೌರವಯುತ ಸ್ಥಾನ ಪಡೆಯಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಹೊನ್ನಾಳಿ(Honnali) ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ ಉದ್ಘಾಟಿಸಿದರು. ನಂದಿ ವಿದ್ಯಾ ಸಂಸ್ಥೆಯ ಡಿ.ಬಿ.ಶಂಕರಪ್ಪ  ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಂದಿ ವಧು-ವರರ ಅನ್ವೆಷಣಾ ಕೇಂದ್ರ ಉದ್ಘಾಟನೆಗೊಂಡಿತು. ನಿವೃತ್ತ ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್, ಡಾ. ಧನಂಜಯ ಅವರನ್ನು ಸನ್ಮಾನಿಸಲಾಯಿತು. 
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪದವೀಧರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ಬಳ್ಳೆಕೆರೆ ಸಂತೋಷ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಹಾ.ಮಾ.ನಾಗಾರ್ಜುನ್, ನಿವೃತ್ತ ಪ್ರಾಧ್ಯಾಪಕ ಬಸವರಾಜ್ ನಲ್ಲಿಸರ, ನಂದಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜಿ.ಕೆ.ಪರಮೇಶ್ವರಪ್ಪ, ಪಿ.ರುದ್ರೇಶ್, ನಂದಿ ಮಹಿಳಾ ವೇದಿಕೆ ಅಧ್ಯಕ್ಷೆ ಉಮಾ ಪಾಟೀಲ್, ಜಯರಾಜ ಗಾಮದ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net