ಭದ್ರಾವತಿ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಂಘ 100 ಮತ್ತು ಸಾಮರಸ್ಯ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಸಂಘ ಚಾಲಕ ಬಿ.ಪಿ.ಶಿವಕುಮಾರ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ.ರಾಘವೇಂದ್ರ ರಾವ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ
ಪ್ರಜಾಪ್ರಭುತ್ವ ಸ್ಥಾಪಿಸಲು ನಿರಂತರ ಹೋರಾಟ ಮಾಡಿದ್ದು ಸಂಘ
ಮಂಥನ ವೇದಿಕೆಯಿಂದ ಸಂಘ 100 ಮತ್ತು ಸಾಮರಸ್ಯ ಸಂವಾದ
ಭದ್ರಾವತಿ: ನಾವು, ನಮ್ಮ ಸಮಾಜ, ಸಂಪ್ರದಾಯ, ಸಂಸ್ಕೃತಿಗಳನ್ನು ನೆನಪು ಮಾಡಿಕೊಡುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ ಎಂದು ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ನಗರದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮಂಥನ ವೇದಿಕೆಯಿಂದ ಏರ್ಪಡಿಸಿದ್ದ ಸಂಘ 100 ಮತ್ತು ಸಾಮರಸ್ಯ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ನಮ್ಮ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದೇವೆ ಎಂಬುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಅಂದಿನ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಟ ಮಾಡಿ ಪ್ರಜಾಪ್ರಭುತ್ವ ಸ್ಥಾಪಿಸಲು ನಿರಂತರ ಹೋರಾಟ ಮಾಡಿದ್ದು ಸಂಘ. ಆದರೆ ಇಂದು ಅಂತಹ ಸಂಘದ ವಿರುದ್ಧ ನಿರ್ಬಂಧ ವಿಧಿಸಬೇಕೆಂಬ ಆಗ್ರಹ ಕೇಳಿಬರುತ್ತಿರುವುದು ವಿಪರ್ಯಾಸ ಎಂದರು.
ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಳಾಗುತ್ತಿದೆ. ಇದರ ರಕ್ಷಣೆ ಮಾಡಬೇಕಾದ ಕಾರ್ಯ ತುರ್ತಾಗಿ ಆಗಬೇಕು. ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸಲು ಮುಂದಾಗಬೇಕು. ಕನ್ನಡದಲ್ಲಿ ಸಹಿ ಮಾಡಬೇಕು. ಆಗ ನಮ್ಮ ದೇಶದ ಆರ್ಥಿಕ ಅಭಿವೃದ್ಧಿ ಆಗುವ ಮೂಲಕ ಭಾರತ ಬೆಸ್ಟ್, ಭಾರತ ಸ್ಟ್ ಆಗುತ್ತದೆ. ಆ ಮೂಲಕ ತನ್ನತನ ಉಳಿಸಿಕೊಂಡಂತಾಗುತ್ತದೆ ಎಂದರು.
ಭಾರತ ವಿಶಾಲ ದೃಷ್ಟಿಕೋನ ಹೊಂದಿದೆ. ಕ್ರೈಸ್ತರು, ಮುಸಲ್ಮಾನರು ಸೇರಿದಂತೆ ಎಲ್ಲ ಧರ್ಮೀಯರಿಗೂ ಆಶ್ರಯ ನೀಡಿದೆ. ಸಂಘವು ಪ್ರೀತಿಯ ಆಧಾರದ ಮೇಲೆ ನಡೆಯುತ್ತಿದೆಯೇ ಹೊರತು ದ್ವೇಷದ ಆಧಾರದಲ್ಲಿ ಅಲ್ಲ. ಅಸಮಾನತೆ ಹೋಗಲಾಡಿಸಿ ಸಾಮರಸ್ಯದ ಬದುಕು ನಡೆಸುವ ಸಲುವಾಗಿ ಸಂಘಕ್ಕೆ 100 ವರ್ಷವಾದರೂ ಅದೇ ನಿಟ್ಟಿನಲ್ಲಿ ಸಾಗುತ್ತಿದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಒಂದಾಗಿ ಬಾಳಬೇಕು. ಜಾತಿಗೆ ಆದ್ಯತೆ ನೀಡಿ ಜಾತಿಗೊಂದು ಸ್ಮಶಾನಗಳನ್ನು ತೆರೆಯುವುದು ಸರಿಯಲ್ಲ ಎಂದು ತಿಳಿಸಿದರು.
ಪ್ರಮುಖರಾದ ಕೆ.ಎನ್.ಶ್ರೀಹರ್ಷ, ಸಂಘ ಚಾಲಕ ಬಿ.ಪಿ.ಶಿವಕುಮಾರ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ.ರಾಘವೇಂದ್ರ ರಾವ್ ಇದ್ದರು.
ಸಮಾಜದಲ್ಲಿ ಪರಿವರ್ತನೆ ಆಗಬೇಕು. ದೇಶದಲ್ಲಿ ಹಿಂದುಗಳ ಜನಸಂಖ್ಯೆ ಹೆಚ್ಚಾಗಬೇಕು. ಮೂರು ಮಕ್ಕಳಿಗಿಂತ ಕಡಿಮೆ ಇರುವ ಸಮಾಜ ಯಾವ ಆಕ್ರಮಣವೂ ಇಲ್ಲದೆ ತನ್ನಿಂದ ತಾನೇ ನಶಿಸಿಹೋಗುತ್ತದೆ. 2047ಕ್ಕೆ ಬುರ್ಕಾ ಧರಿಸಿದ ಮಹಿಳೆ ಈ ದೇಶದ ಪ್ರಧಾನಿ ಆಗುತ್ತಾರೆ ಎಂದು ಸಂಸದ ಓವೈಸಿ ಹೇಳಿದರೆ, ದೇಶದ ಪ್ರಧಾನಿ ನರೇಂದ್ರ ಮೋದಿ 2047ಕ್ಕೆ ವಿಕಸಿತ ಭಾರತ ಆಗಬೇಕೆಂಬ ಕಲ್ಪನೆ ನಮ್ಮ ಮುಂದಿಟ್ಟಿದ್ದಾರೆ. ಯಾವುದು ಬೇಕು ಎಂಬುದನ್ನು ಜನತೆ ತೀರ್ಮಾನಿಸಬೇಕು.
ಡಾ. ಕಲ್ಲಡ್ಕ ಪ್ರಭಾಕರ್ ಭಟ್,ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ