ಹೊಸನಗರ ತಾಲೂಕಿನ ಕರಿಮನೆ ಪ್ರಾಥಮಿಕ ಶಾಲೆಗೆ ಅಗತ್ಯವಿರುವ ಮೂಲ ಸೌಲಭ್ಯಗಳ ಕುರಿತು ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ದೇವಮ್ಮ ಗೋಪಾಲ್, ಉಮೇಶ್, ರಮೇಶ ಇತರರಿದ್ದರು.
ಹೊಸನಗರ: ವಿದ್ಯಾವಂತರೇ ಅನೈತಿಕ, ಅಕ್ರಮ, ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿರುವುದನ್ನು ನೋಡಿದರೆ ಶಿಕ್ಷಣ ಪದ್ಧತಿಯಲ್ಲೇ ಕೊರತೆ ಇದೆ ಎನಿಸುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಕರಿಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಸಂಸ್ಕಾರ ಕಲಿಸುವಂತೆ, ಒಳ್ಳೆ ಬದುಕಿನ ಕಡೆ ಹೆಜ್ಜೆ ತೋರಿಸುವ ಶಿಕ್ಷಣ ಇಂದು ಅಗತ್ಯವಾಗಿದೆ ಎಂದರು.
ಗ್ರಾಮೀಣ ಮಕ್ಕಳು ಉತ್ತಮ ಪ್ರತಿಭೆ ಹೊಂದಿದ್ದು, ಹಳ್ಳಿಯಿಂದ ದಿಲ್ಲಿಯ ತನಕ ಸಾಧನೆ ತೋರುತ್ತಿದ್ದಾರೆ. ಬದುಕಿನ ದಾರಿಯಲ್ಲೂ ಅಷ್ಟೇ ಉತ್ತಮವಾಗಿ ನಡೆಯಬೇಕಿದೆ. ಕರಿಮನೆ ಶಾಲೆಗೆ ಈಗಾಗಲೇ ಕೆಪಿಸಿಯಿಂದ 39 ಲಕ್ಷ, ವಿವೇಕ ಕೊಠಡಿಗೆ 20 ಲಕ್ಷ, ಹಳೇ ಕಟ್ಟಡ ದುರಸ್ತಿಗೆ 6 ಲಕ್ಷ ರೂ. ಅನುದಾನ ನೀಡಿದ್ದೇನೆ. ಅಗತ್ಯ ಸೌಲಭ್ಯಗಳಿಗೆ ಮುಂದಿನ ದಿನದಲ್ಲಿ ಮತ್ತೆ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ದೇವಮ್ಮ ಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯಿಂದ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಾನ್ವಿ, ಅನಿಕೇತ್ ಅವರನ್ನು ಪುರಸ್ಕರಿಸಲಾಯಿತು. ಶಿಕ್ಷಕರೇ ತರಬೇತಿ ನೀಡಿದ ಮಕ್ಕಳ ಯಕ್ಷಗಾನ ಮೆಚ್ಚುಗೆಗೆ ಪಾತ್ರವಾಯಿತು.
ಾ.ರೆವರೆಂಡ್ ಪಿಂಟೋ, ಗೀತಾ ೌಂಡೇಶನ್ ಸಂಸ್ಥಾಪಕ ಶಂಕರ ಐತಾಳ್, ಮುಖ್ಯ ಶಿಕ್ಷಕಿ ಪಿ.ಜಿ.ಸಂದ್ಯಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಗಾಯತ್ರಿ ದಿನೇಶ್, ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಗ್ರಾಪಂ ಸದಸ್ಯರಾದ ರಮೇಶ, ಆದರ್ಶ, ಅರವಿಂದ್, ಗೋಪಾಲ್, ದೇವು, ಪುಷ್ಪಾ, ಸುಧಾ ಇತರರಿದ್ದರು.