ಗ್ರಾಮದಲ್ಲಿದ್ದ ನಾಯಿ(Dog)ಗಳನ್ನು ಎಳೆದೊಯ್ಯುತ್ತಿದ್ದ ಚಿರತೆಯನ್ನು ನಾಯಿಗಳೇ ಬೆನ್ನಟ್ಟಿ ಗಾಯಗೊಳಿಸಿವೆ. ಈ ವೇಳೆ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿದ್ದ ಚಿರತೆ ನಿತ್ರಾಣಗೊಂಡು ಹೊಂಡಕ್ಕೆ ಬಿದ್ದಿದೆ. ನಾಯಿಗಳು ದಾಳಿ ಮಾಡುತ್ತಿರುವ ದೃಶ್ಯ ಮೊಬೈಲ್(Mobile)ನಲ್ಲಿ ಸೆರೆಯಾಗಿದೆ. ಅರಿವಳಿಕೆ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಚಿರತೆ ಸೆರೆ ಹಿಡಿದಿದೆ.