ಗುರು ಪರಂಪರೆಗೆ ಎಂದಿಗೂ ಅಳಿವಿಲ್ಲ

ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿಯಲ್ಲಿ ಈಸೂರಿನ ಬಸವರಾಧ್ಯ ಅವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ದೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಬಿ.ವೈ.ರಾಘವೇಂದ್ರ, ಭಾರತಿ ಶೆಟ್ಟಿ ಇತರರಿದ್ದರು.
ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿಯಲ್ಲಿ ಈಸೂರಿನ ಬಸವರಾಧ್ಯ ಅವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ದೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಬಿ.ವೈ.ರಾಘವೇಂದ್ರ, ಭಾರತಿ ಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅಭಿಮತ
  • ರಾಷ್ಟ್ರೀಯ ಪ್ರಶಸ್ತಿ ಪ್ರದಾನ
  • ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಶಿರಾಳಕೊಪ್ಪ: ದೇಶವನ್ನು ಅನೇಕ ರಾಜ ಪರಂಪರೆ ಆಳಿ, ಅಳಿದುಹೋಗಿವೆ. ಆದರೆ ಮಠ ಮತ್ತು ಗುರು ಪರಂಪರೆಗೆಳಿಗೆ ಎಂದಿಗೂ ಅಳಿವಿಲ್ಲ ಎಂದು ಶಿರಹಟ್ಟಿ ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರು ಪರಂಪರೆ ಜಾತ್ರೋತ್ಸವ, ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ದೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, 9 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಹರಕೆ ರಥದ ಉದ್ಘಾಟನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಕ್ತರು ತಮ್ಮ ಮನಸ್ಸಿನಲ್ಲಿರುವ ಶಕ್ತಿಯನ್ನು ಭಕ್ತಿ ರೂಪದಲ್ಲಿ ಬಳಕೆ ಮಾಡಿದಾಗ ಒಳ್ಳೆಯದಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕಡೇನಂದಿಹಳ್ಳಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರ ಪೂಜೆಯನ್ನು ಪ್ರೀತಿಯಿಂದ ನೋಡುತ್ತೇವೆ. ಅವರ ಕ್ರಿಯಾಶೀಲತೆಗೆ ಮಠದ ಕಟ್ಟಡ ಸಾಕ್ಷಿಯಾಗಿದೆ. ಸ್ವಾಮೀಜಿ ಆದವರು ಎಲ್ಲ ವಿದ್ಯೆಗಳಲ್ಲಿ ಪ್ರಾವೀಣ್ಯ ಹೊಂದಿರಬೇಕು. ಕಡೇನಂದಿಹಳ್ಳಿ ಶ್ರೀಗಳು ಎಲ್ಲ ರಂಗಗಳ ಸಾಧಕರನ್ನು ಗುರುತಿಸಿ ಗೌರವಿಸಿರುವುದು ದೊಡ್ಡ ಕೆಲಸ ಎಂದರು.

ಮಕ್ಕಳಿಗೆ ವಿದ್ಯೆಯ ಜತೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು. ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಎಲ್ಲ ಸಾತ್ವಿಕ ಕಾರ್ಯಗಳಿಗೆ ನಾವೆಲ್ಲರೂ ಜತೆಯಾಗೋಣ. ಬಿ.ವೈ.ರಾಘವೇಂದ್ರಲೋಕಸಭಾ ಸದಸ್ಯ

ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 12 ವರ್ಷಗಳಲ್ಲಿ ಮಠದಲ್ಲಿ ಆಗಿರುವ ಎಲ್ಲ ಬೆಳವಣಿಗೆಗೆ ರಂಭಾಪುರಿ ಜಗದ್ಗುರುಗಳು, ಎಲ್ಲ ಹಿರಿಯರ ಆಶೀರ್ವಾದ, ಶ್ರೀ ಮಳೆಮಲ್ಲೇಶ್ವರ ಸ್ವಾಮಿ ಕೃಪೆ ಹಾಗೂ ಭಕ್ತರ ಸಹಕಾರ ಕಾರಣವಾಗಿದೆ ಎಂದರು. ಗದಗ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ, ತೊಗರ್ಸಿ ಶ್ರೀ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಲಿಂಗಸುಗೂರು ನಂದಿಕೇಶ್ವರಿ ಅಮ್ಮ, ವಿವಿಧ ಮಠಾಧೀಶರು ಹಾಜರಿದ್ದರು.
ಬಿಸಲಹಳ್ಳಿಯ ಡಿ.ಕೆ.ಮಧುರಾ ಅವರಿಂದ ಭರತನಾಟ್ಯ ಜರುಗಿತು. ಎಂಎಲ್‌ಸಿ ಭಾರತಿ ಶೆಟ್ಟಿ, ಬಿಜೆಪಿ ಮುಖಂಡ ಕೆ.ಎಸ್.ಗುರುಮೂರ್ತಿ, ಶಿಕಾರಿಪುರ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ನವೀನ್‌ಕುಮಾರ್, ಬಸವರಾಜಪ್ಪ ಚನ್ನಳ್ಳೇರ, ಮಹಾಲಿಂಗಯ್ಯ ಶಾಸಿ, ಕೆ.ಎಚ್.ಶ್ವೇತಾ, ಚನ್ನೇಶ ಶಾಸಿ, ಡಾ. ಗುರುಪಾದಯ್ಯ ಸಾಲಿಮಠ, ಪಿ.ಎಸ್.ದೇವೇಂದ್ರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net