ಮೈದಾನದ ಮಾಲೀಕತ್ವ ವಿಷಯ ಇನ್ನೂ ತೀರ್ಮಾನವಾಗಿಲ್ಲ. ವಿಷಯ ಕೋರ್ಟ್‌ನಲ್ಲಿದೆ. ಅಂತಿಮ ಆದೇಶ ಬರುವವರೆಗೂ ಇಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಹೀಗಾಗಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲದೆ ಇರುವುದರಿಂದ ಸಾರ್ವಜನಿಕರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಮೈದಾನಕ್ಕೆ ಹೊಂದಿಕೊಂಡಂತೆಯೇ ಇರುವ ಅಂಗಡಿ, ಹೋಟೆಲ್, ಬ್ಯಾಂಕ್ ಹಾಗೂ ಕಚೇರಿಗಳಿಗೆ ತೆರಳಲು ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.