ಎಲ್ಲರ ಏಳಿಗೆ ಸಹಕಾರ ಚಳವಳಿ ಧ್ಯೇಯ | Annual General Meeting

ಶಿಕಾರಿಪುರದಲ್ಲಿ ಬಸವೇಶ್ವರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಡಿ.ಎಲ್.ಬಸವರಾಜ್, ಬಿ.ಡಿ.ಭೂಕಾಂತ್, ಟಿ.ಜಿ.ರಾಜೇಂದ್ರ, ವಿನಯ್ಬಾಬು ಇತರರಿದ್ದರು.
ಶಿಕಾರಿಪುರದಲ್ಲಿ ಬಸವೇಶ್ವರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಡಿ.ಎಲ್.ಬಸವರಾಜ್, ಬಿ.ಡಿ.ಭೂಕಾಂತ್, ಟಿ.ಜಿ.ರಾಜೇಂದ್ರ, ವಿನಯ್ಬಾಬು ಇತರರಿದ್ದರು.
Published on
ಶಿಕಾರಿಪುರ: ಸಹಕಾರ ಚಿಂತನೆಗಳು ಪರಸ್ಪರ ಒಬ್ಬರನ್ನೊಬ್ಬರು ಬೆಳೆಸುವಂತೆ ಮಾಡುತ್ತವೆ ಎಂದು ಹಿರಿಯ ಸಹಕಾರಿ ಟಿ.ಜಿ.ರಾಜೇಂದ್ರಪ್ರಸಾದ್ ಹೇಳಿದರು.
ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರ ಎಂಬುದು ಕೇವಲ ಒಂದು ವ್ಯವಹಾರವಲ್ಲ. ಎಲ್ಲರಿಗಾಗಿ ಒಬ್ಬರು, ಒಬ್ಬರಿಗಾಗಿ ಎಲ್ಲರೂ ಎಂಬ ಉದಾತ್ತ ತತ್ವದ ಮೇಲೆ ನಿಂತಿರುವ ಒಂದು ದೊಡ್ಡ ಕುಟುಂಬ. ಸಂಘದ ಸದಸ್ಯರಿಂದ ಠೇವಣಿ ಸಂಗ್ರಹಣೆ ಮತ್ತು ಪಿಗ್ಮಿ ಸಂಗ್ರಾಹಕರಿಂದ ಸಾಲ ವಿತರಣೆಯಲ್ಲಿ ಗಣನೀಯ ಏರಿಕೆಯಾಗಿದೆ. ಸಂಘ ಲಾಭದ ಹಾದಿಯಲ್ಲಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್ ಮಾತನಾಡಿ, ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಹೆಚ್ಚಿನ ವ್ಯವಹಾರ ಮಾಡಿ, ಲಾಭಗಳಿಸಿ ಸಂಘವು ಉತ್ತುಂಗಕ್ಕೆ ಏರಲಿ ಎಂದು ಆಶಿಸಿದರು.
ಸಹಕಾರಿ ಧುರೀಣ ಬಿ.ಡಿ.ಭೂಕಾಂತ್ ಮಾತನಾಡಿ, ಸದಸ್ಯರು 5 ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ 2ರಲ್ಲಿ ಭಾಗವಹಿಸಬೇಕು. ವರ್ಷದಲ್ಲಿ ಎರಡು ಬಾರಿ ಆರ್ಥಿಕ ವ್ಯವಹಾರ ಮಾಡಬೇಕು. ಆಗ ಮಾತ್ರ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಅರ್ಹತೆ ದೊರೆಯುತ್ತದೆ ಎಂದು ತಿಳಿಸಿದರು.
ಸಂಘದ ಕಾನೂನು ಸಲಹೆಗಾರ ಪಿ.ಜೆ.ವಿನಯ್ ಬಾಬು  ಮಾತನಾಡಿ, ಸಂಘದಿಂದ ಸಾಲ ಪಡೆದ ಸದಸ್ಯರಿಂದ ಯಾವುದೇ ದಾವಾ ಕೇಸುಗಳನ್ನು ಹಾಕದೆ ಸಾಲ ವಸೂಲಾತಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.
ಎಸ್‌ಎಸ್‌ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಸಂಘದ ನಿರ್ದೇಶಕರಾದ ಪ್ರವೀಣ್, ವಿವೇಕ್, ಪ್ರಸಾದ್, ವಿನಾಯಕ, ನವೀನ್ ಶಾಸ್ತ್ರಿ, ಸಂಜಿತ್, ಪ್ರವೀಣ್, ರೇಖಾ ಸಿದ್ದಲಿಂಗೇಶ್, ವೀಣಾ, ಪ್ರವೀಣ್‌ಕುಮಾರ್, ಮೃತ್ಯುಂಜಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net