ತೀರ್ಥಹಳ್ಳಿಯಲ್ಲಿ ಯುವ ಲೇಖಕ ದಿ. ನಂದನ್ ಕುಪ್ಪಳಿ ಅವರ ನೀಲಿ ಹೂವಿನ ನೆನಪುಗಳು ಕವನ ಸಂಕಲನ ಬಿಡುಗಡೆ ಮಾಡಲಾಯಿತು. ನೆಂಪೆ ದೇವರಾಜ್, ಟಿ.ಕೆ.ರಮೇಶ್ ಶೆಟ್ಟಿ, ರಾಮಚಂದ್ರ ಕೊಪ್ಪಲು, ಶಿವಲಿಂಗೇಗೌಡ, ರಾಮಸ್ವಾಮಿ ಇದ್ದರು.
Published on:
Copied
Follow Us
ತೀರ್ಥಹಳ್ಳಿ: ಪ್ರೇಮ ಎಂಬುದು ಸಮುದ್ರದ ಹಾಗೆ ನಿಶ್ಚಲವಾಗಿ ಕಂಡರೂ ಸದಾ ಕ್ರಿಯಾಶೀಲವಾಗಿರುತ್ತದೆ. ನಂದನ್ ರಚಿಸಿರುವ ಪ್ರೀತಿಯ ಕವಿತೆಗಳು ಪ್ರಕೃತಿಯೊಳಗಿನ ಆರಾಧನೆಯನ್ನು
ಪ್ರಜ್ವಲಿಸುತ್ತದೆ ಎಂದು ಲೇಖಕ ನೆಂಪೆ ದೇವರಾಜ್ ಹೇಳಿದರು.
ಪಟ್ಟಣದಲ್ಲಿ ಈಚೆಗೆ ನಿಧನರಾದ ಯುವ ಲೇಖಕ ನಂದನ್ ಕುಪ್ಪಳಿ ಅವರ ಎರಡನೇ ಕವನ ಸಂಕಲನ ನೀಲಿ ಹೂವಿನ ನೆನಪುಗಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
30 ವರ್ಷದ ನಂದನ್ ಅವರು ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜನಾಕಾರಿಯಾಗಿ ರೂಪಿಸಿದ ಯೋಜನೆಯನ್ನು ಕರ್ನಾಟಕದ ಮುಖ್ಯಮಂತ್ರಿ ಮೆಚ್ಚಿದ್ದರು. ಯೋಜನೆಯ
ವಿವರ ಪಡೆಯುತ್ತಲೇ ಸಿಎಂ ಸ್ಥಳದಲ್ಲಿಯೇ 1 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಆದರೆ ನಂದನ್ ಕಾಯಿಲೆಗೆ ತುತ್ತಾದರು ಎಂದು ಸ್ಮರಿಸಿದರು.
ನಂದನ್ ನಮ್ಮ ಜತೆಗಿರದಿದ್ದರೂ ಆತನ ವಿಚಾರಗಳನ್ನು ಹೊಂದಿರುವ ಸಾಹಿತ್ಯದ ಪ್ರೀತಿ ನಮ್ಮೊಂದಿಗೆ ಇದೆ. ಆತ ನೋವನ್ನು ಮರೆಸುವ ಕಾಣಿಕೆ ಬಿಟ್ಟು ಹೋಗಿದ್ದಾನೆ ಎಂದು ಪ್ರಕಾಶಕ
ಬಿ.ಎನ್.ಸುನೀಲ್ಕುಮಾರ್ ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ರೇಖಾಚಿತ್ರ ಕಲಾವಿದ ರಾಮಚಂದ್ರ ಕೊಪ್ಪಲು, ಸಹ ಪ್ರಾಧ್ಯಾಪಕ ಶಿವಲಿಂಗೇಗೌಡ, ನಂದನ್ ಅವರ ತಂದೆ ರಾಮಸ್ವಾಮಿ ಇದ್ದರು.