ಶಾಲೆಗಳ ಅಭಿವೃದ್ಧಿ ಸ್ಥಳೀಯರ ಹೊಣೆ | Computer donate

ಹೊಸನಗರ ತಾಲೂಕಿನ ಮಂಡ್ರಳ್ಳಿ ಸರ್ಕಾರಿ ಶಾಲೆಗೆ ಉಚಿತವಾಗಿ ಕಂಪ್ಯೂಟರ್ ಅನ್ನು ಡಾ. ಅಂಬೇಡ್ಕರ್ ಆದಿಜಾಂಬವ ರಾಜ್ಯ ಸಮಿತಿ ಅಧ್ಯಕ್ಷ ಎನ್.ಪ್ರಕಾಶ್ ಹಸ್ತಾಂತರಿಸಿದರು. ಶ್ರಿ ರಾಘವೇಶ್ವರ ಭಾರತೀ ಸ್ವಾಮೀಜಿ, ವಿಶುಕುಮಾರ್, ಎಂ.ಎಸ್.ಪುಟ್ಟಪ್ಪ ಇತರರಿದ್ದರು.
ಹೊಸನಗರ ತಾಲೂಕಿನ ಮಂಡ್ರಳ್ಳಿ ಸರ್ಕಾರಿ ಶಾಲೆಗೆ ಉಚಿತವಾಗಿ ಕಂಪ್ಯೂಟರ್ ಅನ್ನು ಡಾ. ಅಂಬೇಡ್ಕರ್ ಆದಿಜಾಂಬವ ರಾಜ್ಯ ಸಮಿತಿ ಅಧ್ಯಕ್ಷ ಎನ್.ಪ್ರಕಾಶ್ ಹಸ್ತಾಂತರಿಸಿದರು. ಶ್ರಿ ರಾಘವೇಶ್ವರ ಭಾರತೀ ಸ್ವಾಮೀಜಿ, ವಿಶುಕುಮಾರ್, ಎಂ.ಎಸ್.ಪುಟ್ಟಪ್ಪ ಇತರರಿದ್ದರು.
Published on
ಹೊಸನಗರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳು, ಹಳೇ ವಿದ್ಯಾರ್ಥಿಗಳು, ದಾನಿಗಳು, ಮೇಲ್ವಿಚಾರಣಾ ಸಮಿತಿಗಳ ಪಾತ್ರ ಅತ್ಯಂತ ನಿರ್ಣಾಯಕ ಎಂದು ಡಾ. ಅಂಬೇಡ್ಕರ್ ಆದಿಜಾಂಬವ ರಾಜ್ಯ ಸಮಿತಿ ಅಧ್ಯಕ್ಷ ಎನ್.ಪ್ರಕಾಶ್ ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ತಾಲೂಕಿನ ಮಂಡ್ರಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿವಮೊಗ್ಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಡಾ. ಅಂಬೇಡ್ಕರ್ ಆದಿಜಾಂಬವ ರಾಜ್ಯ ಸಮಿತಿ ಸಹಯೋಗದಲ್ಲಿ ಉಚಿತವಾಗಿ ನೀಡಿದ ಕಂಪ್ಯೂಟರ್ ಅನ್ನು ಶ್ರಿ ರಾಘವೇಶ್ವರ ಭಾರತೀ ಸ್ವಾಮೀಜಿ ಸಮ್ಮುಖದಲ್ಲಿ ಹಸ್ತಾಂತರಿಸಿ ಮಾತನಾಡಿದರು.
ಮೂಲ ಸೌಕರ್ಯ ಕಲ್ಪಿಸುವುದು, ಗುಣಮಟ್ಟದ ಶಿಕ್ಷಣಕ್ಕೆ ಬೆಂಬಲ ನೀಡುವುದು ಹಾಗೂ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಶ್ರಮಿಸಿ ಮಾದರಿ ಶಾಲೆಯನ್ನಾಗಿ ರೂಪಿಸುವುದು ಎಲ್ಲರ ಆದ್ಯ ಕರ್ತವ್ಯ. ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾನಿಗಳು ನೆರವಾಗಬೇಕು. ಆಧುನಿಕ ತಂತ್ರಜ್ಞಾನಗಳ ಸೌಕರ್ಯ ವಿದ್ಯಾರ್ಥಿಗಳ ಕೈಗೆಟುಕಿದಾಗ ಶೈಕ್ಷಣಿಕ ಪ್ರಗತಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮಿತಿಯು ಕಾರ್ಯೋನ್ಮುಖವಾಗಿದೆ ಎಂದರು.
ಯುಬಿಐ ಪ್ರಾಂತೀಯ ಮುಖ್ಯಸ್ಥ ವಿಶುಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಸ್.ಪುಟ್ಟಪ್ಪ, ಸದಸ್ಯ ದೇವೇಂದ್ರ, ಮುಖ್ಯ ಶಿಕ್ಷಕ ಮಹಾಂತೇಶ್, ಶಿಕ್ಷಕಿ ಆಸ್ಮಾ, ಲೋಲಾಕ್ಷಿ, ರೇಖಾ ಕುಮಾರಿ, ರಾಜ್ಯ ಆದಿ ಜಾಂಬವ ಸಂಘದ ಗೌರವಾಧ್ಯಕ್ಷ ದೇವೇಂದ್ರಪ್ಪ, ಕಾರ್ಯದರ್ಶಿ ಚನ್ನೇಶ್, ಜಿಲ್ಲಾಧ್ಯಕ್ಷ ಕರಿಬಸಪ್ಪ, ತಾಲೂಕು ಅಧ್ಯಕ್ಷ ದೇವೇಂದ್ರ, ನಗರ ಅಧ್ಯಕ್ಷ ಪ್ರವೀಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net