ಸಂಕೇತ್ ಸಮಾಧಿ ಧ್ವಂಸ ಮುಸ್ಲಿಮರದ್ದೇ ಕೃತ್ಯ | Sanket Samadhi

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‌ಪಿ ಬಿ.ನಿಖಿಲ್ ಅವರಿಂದ ವಿವರಣೆ ಪಡೆದರು
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‌ಪಿ ಬಿ.ನಿಖಿಲ್ ಅವರಿಂದ ವಿವರಣೆ ಪಡೆದರು
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಪಿ ಬಿ.ನಿಖಿಲ್ ಅವರಿಂದ ವಿವರಣೆ ಪಡೆದ ಕೆ.ಎಸ್.ಈಶ್ವರಪ್ಪ
  • ಸಂಕೇತ್ ಸಾವಿಗೆ ಇಡೀ ಹಿಂದೂ ಸಮಾಜ ಮರುಕಪಟ್ಟಿದೆ
  • ಸಮಾಧಿ ಧ್ವಂಸ ಮಾಡಿವರಿಗೆ ತಕ್ಕ ಶಾಸ್ತಿ ಆಗಬೇಕು
ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ, ಸೂಳೇಬೈಲ್‌ನ ಸಂಕೇತ್ ಸಮಾಧಿ(Sanket Samadhi) ಧ್ವಂಸ ಗೂಂಡಾ ಮುಸ್ಲಿಮರದ್ದೇ ಕೆಲಸ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. 
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‌ಪಿ ಬಿ.ನಿಖಿಲ್ ಅವರಿಂದ ವಿವರಣೆ ಪಡೆದರು, ಸಂಕೇತ್ ಸಾವಿಗೆ ಇಡೀ ಹಿಂದೂ ಸಮಾಜ ಮರುಕಪಟ್ಟಿದೆ. ಸಹಪಾಠಿ(Classmate)ಗಳಿಂದಲೇ ಹತ್ಯೆಯಾದ ಸಂಕೇತ್ ಸಾವಿನ ದುಃಖ ಇನ್ನೂ ಕುಟುಂಬದಿಂದ ದೂರವಾಗಿಲ್ಲ. ಹೀಗಿರುವಾಗ ಆತನ ಸಮಾಧಿಯನ್ನು ಧ್ವಂಸ ಮಾಡುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಸಂಕೇತ್ ಸಮಾಧಿ ಧ್ವಂಸವನ್ನು ಯಾರೇ ಮಾಡಿದ್ದರೂ ತಕ್ಕ ಶಾಸ್ತಿ ಆಗಬೇಕು. ಪೊಲೀಸ್ ಇಲಾಖೆ(Police Dept) ಸುಮ್ಮನೆ ಕುಳಿತರೆ ಆಗದು. ತಕ್ಷಣ ವಿಶೇಷ ತಂಡ ರಚನೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ವಿಚಾರ ತಿಳಿದು ನೋವಾಯಿತು

ಶಿವಮೊಗ್ಗ: ಊರಗಡೂರಿನಲ್ಲಿ ಸಂಕೇತ್ ಹತ್ಯೆಯಾಗಿತ್ತು. ನಾವು ಆತನ ಮನೆಗೆ ಹೋಗಿ ಪಾಲಕರಿಗೆ ಧೈರ್ಯ ಹೇಳಿಬಂದಿದ್ದೆವು. ಇದೀಗ ಸಂಕೇತ್ ಸಮಾಧಿ ಒಡೆದುಹಾಕಿದ್ದಾರೆ ಎಂಬುದನ್ನು ಕೇಳಿ ನೋವಾಯಿತು ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ(Araga Gyanendra) ಬೇಸರ ವ್ಯಕ್ತಪಡಿಸಿದರು. ಪೊಲೀಸ್ ವ್ಯವಸ್ಥೆ ಬಗ್ಗೆ ಭಯ ಇಲ್ಲದಂತಾಗಿದೆ. ಶಿವಮೊಗ್ಗದಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬ ಆತಂಕ ಕಾಡುತ್ತಿದೆ. ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಈ ರೀತಿ ಘಟನೆಗಳು ಸಹಜ ಎನ್ನುವಂತಾಗಿದೆ ಎಂದು ಕಿಡಿಕಾರಿದರು.
"

ರಾತ್ರಿ ವಿಷಯ ಗೊತ್ತಾಯಿತು. ಕೆಟ್ಟ ಮಾನಸಿಕತೆ ಇರುವ ವ್ಯಕ್ತಿಗಳ ಪತ್ತೆ ಮಾಡುವಂತೆ ಅಂದು ಹೇಳಿದ್ದೆ, ಇಂದೂ ಹೇಳುತ್ತಿದ್ದೇನೆ. ಹುಡುಗನ್ನು ಬದುಕಲು ಬಿಡಲಿಲ್ಲ. ಇಂದು ಸ್ಮಶಾನದಲ್ಲಿ ಇರಲೂ ಬಿಡುತ್ತಿಲ್ಲ. ಆತನ ಮೇಲೆ ಏನು ದ್ವೇಷ? ಸಮಾಧಿ ಒಳಗೂ ಸಂಕೇತ್ ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಇದಕ್ಕೆ ಮುಸ್ಲಿಮರೇ ಉತ್ತರ ಕೊಡಬೇಕು. ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net